ಬಂಟ್ವಾಳ:  ತಾಲೂಕಿನ ಚೇಳೂರು ಸಂತ ತೋಮಸ್ ಚಚ್೯ ಮತ್ತು ಸಂತ ತೋಮಸ್ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ಕಾಂಕ್ರೀಟಿಕರಣಗೊಂಡ  ನೂತನ ರಸ್ತೆಯನ್ನು ಕಳೆದ ಶಾಸಕ ಯು.ಟಿ ಖಾದರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ  ಶಾಸಕರು  ಸುಮಾರು  ೭ ಕೋಟಿ ವೆಚ್ಚ ಅನುದಾನದಿಂದಚೇಳೂರನಿಂದ  ನೇರವಾಗಿ ಇರಾ ಸಂಪರ್ಕ ರಸ್ತೆಗೆ ಕಾಮಗಾರಿಗೆ ಶೀಘ್ರವೇ ಆರಂಭವಾಗಲಿದೆ. ಚೇಳೂರು ನನ್ನ ಕ್ಷೇತ್ರ ವ್ಯಾಪ್ತಿಗೆ ಸೇರ್ಪಡೆಯಾದ ನಂತರಹಂತಹಂತವಾಗಿ ಅಭಿವೃದ್ಧಿಪಡಿಸಿದ್ದೆನೆ ಎಂದರು.IMG20200906094602
ಈ ಸಂದರ್ಭ ಗ್ರಾಮಸ್ಥರು ಖಾದರ್ ಅವರನ್ನು ಸನ್ಮಾನಿಸಿದರು. ತೋಮಸ್ ಚಚ್೯ನ ಧರ್ಮಗುರು  ಫಾದರ್ ಮೈಕಲ್ ಡಿಸಿಲ್ವಾ, ಮುಡಿಪು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಶಾಂತ್ ಕಾಜವ, ತಾ.ಪಂ ಮಾಜಿ ಸದಸ್ಯ ಪ್ರವಿಣ್ ಅಳ್ವ, ಚೇಳೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹೆನ್ರ‍್ರಿ ಡಿಸಿಲ್ವಾ, ಮಾಜಿ ಸದಸ್ಯೆ ಶಾಂತಿ ಜ್ಯೋತಿ ಪಿಂಟೋ ಮೊದಲಾದವರಿದ್ದರು.

By suddi9

Leave a Reply

Your email address will not be published. Required fields are marked *