ಬಂಟ್ವಾಳ: ಇಲ್ಲಿನ ಸಂಗಬೆಟ್ಟು,ಪಂಜಿಕಲ್ಲು, ಬುಡೋಳಿ ಗ್ರಾಪಂ ವ್ಯಾಪ್ತಿಯಲ್ಲಿ ಸೋಮವಾರ ಒಂದೇ ದಿನ ಸುಮಾರು 20 ಕೋ.ರೂ. ಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ನೆರವೇರಿಸಿದರು.         IMG-20200907-WA0069

 ಗುದ್ದಲಿಪೂಜೆ:

ರಾಜ್ಯ ಸರ್ಕಾರದ “ರಾಜ್ಯ ರಸ್ತೆ ನಿಧಿಯಿಂದ ಸುಮಾರು 13 ಕೋಟಿ ರೂ ಅನುದಾನದಲ್ಲಿ ಬಂಟ್ವಾಳ—ಮೂಡಬಿದ್ರಿ ಲೋಕೋಪಯೋಗಿ ರಸ್ತೆಯ ಸೊರ್ನಾಡ್ ನಿಂದ  ಪುಚ್ಚಮೊಗರು ತನಕ  ರಸ್ತೆ ಅಗಲೀಕರಣ,50 ಲಕ್ಷ ರೂ.ವೆಚ್ಚದಲ್ಲಿ ಸಿದ್ದಕಟ್ಟೆಯಿಂದ ಹೊಕ್ಕಾಡಿಗೋಳಿ ರಸ್ತೆ ಮರುಡಾಮರೀಕರಣ, ಅಭಿವೃದ್ದಿ,3 ಕೋ.ರೂ.ವೆಚ್ಚದಲ್ಲಿಪಂಜಿಕಲ್ಲುಪದವು-ಆಚಾರಿಪಲ್ಕೆ ರಸ್ತೆ ಡಾಮರೀಕರಣ,2.0 ಕೋಟಿ ರೂ ವೆಚ್ಚದಲ್ಲಿಎಲಿಯನಾಡು ಗ್ರಾಮದ ಕೊನೆರೊಟ್ಟು ಮಾವಿನಕಟ್ಟೆ ರಸ್ತೆ ಅಭಿವೃದ್ಧಿ,35 ಲಕ್ಷ ರೂ ವೆಚ್ಚದಲ್ಲಿ ಆಚಾರಿಪಲ್ಕೆ ಶಾಲೆಗೆ 3  ಕೊಠಡಿ ನಿರ್ಮಾಣ,ಪಂಜಿಕಲ್ಲುಪದವಿನಲ್ಲಿ  20 ಲ.ರೂ. ವೆಚ್ಚದಲ್ಲಿ ನೂತನ  ಹಿಂದೂ ರುದ್ರ ಭೂಮಿ,40 ಲಕ್ಷ ರೂ.ವೆಚ್ಚದಲ್ಲಿಕುಜ್ಲುಬೆಟ್ಟು ಕಾಲೊನಿ ರಸ್ತೆ ಗೆ ಶಿಲಾನ್ಯಾಸವನ್ನು ಶಾಸಕ ರಾಜೇಶ್ ನಾಯ್ಕ್ ನೆರವೇರಿಸಿದರು.IMG-20200907-WA0055

ಹಾಗೆಯೇ  5 ಲಕ್ಷ  ರೂ.ವೆಚ್ಚದಲ್ಲಿ ನಿಂಗಲ್ ಬಾಕಿಮಾರು ರಸ್ತೆ ಅಭಿವೃದ್ಧಿ ಕಾಮಗಾರಿ, 3.50 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದ ನೆಲ್ಲಿಗುಡ್ಡೆ ರಸ್ತೆ ಉದ್ಘಾಟನೆ, 15.00 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಕೈಲಾರು ರಸ್ತೆ ಉದ್ಘಾಟನೆ, 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಕುಜ್ಲುಬೆಟ್ಟು ರಸ್ತೆ ಉದ್ಘಾಟನೆ, 5.00 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾದಕೇದಾಯಿ ರಸ್ತೆ ಉದ್ಘಾಟನೆಯನ್ನು ಶಾಸಕ ರಾಜೇಶ್ ನಾಯ್ಕ್ ನೆರವೇರಿಸಿದರು. ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೂಂದಿಗೆ ಮಾತನಾಡಿದ ಶಾಸಕರು

ಕೊರೊನಾ ಮಾಹಾಮಾರಿಯ ನಡುವೆಯೂ ರಾಜ್ಯ ಸರಕಾರ ಅಭಿವೃದ್ಧಿ ಕಾರ್ಯದಲ್ಲಿ ಮುಂಚೂಣಿ ಯಲ್ಲಿದ್ದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಿ‌.ಪಂ.ಸದಸ್ಯ ತುಂಗಪ್ಪ ಬಂಗೇರ,ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ್ ಪ್ರಭು, ಪ್ರಮುಖರಾದ ರತ್ನಕುಮಾರ್ ಚೌಟ, ಸತೀಶ್ ಪೂಜಾರಿ, ಸಂದೇಶ್ ಶೆಟ್ಟಿ, ಮಂದಾರತಿ ಶೆಟ್ಟಿ, ರಶ್ಮಿತ್ ಶೆಟ್ಟಿ ಕೈತ್ರೋಡಿ, ಪುರುಷೋತ್ತಮ ಶೆಟ್ಟಿವಾಮದಪದವು, ದಿನೇಶ್ ಶೆಟ್ಟಿ ದಂಬೆದಾರ್ ,ಸಂಜೀವ ಪೂಜಾರಿ , ಪ್ರಕಾಶ್ ಅಂಚನ್, ಕರುಣೇಂದ್ರ ಪೂಜಾರಿ, ಲಕ್ಮೀನಾರಾಯಣ ಗೌಡ, ಚಿದಾನಂದ ಕುಲಾಲ್, ಆನಂದ ಕೋಟ್ಯಾನ್, ರಮಾನಾಥ ರಾಯಿ, ನಂದರಾಮರೈ,ಯಶೋಧರ ಕರ್ಬೆಟ್ಟು,ವಸಂತ ಕುಮಾರ್ ಅಣ್ಣಳಿಕೆ, ಸಂತೋಷ ರಾಯಿಬೆಟ್ಟು, ಸೀತರಾಮ ಪೂಜಾರಿ, ಡೊಂಬಯ ಅರಳ, ಗಣೇಶ್ ರೈ ಮಾಣಿ ಮತ್ತಿರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *