ಗುರುಪುರ : ನಿಮ್ಮ ಕ್ಷೇತ್ರದಲ್ಲಿ ಯಾರು ನಿಮಗೆ ಉತ್ತಮ ಸೇವೆ ಒದಗಿಸುತ್ತಾರೋ ಅಂತಹವರ ಆಯ್ಕೆಗೆ ಮತದಾರರು ಕೆಲಸ ಮಾಡಬೇಕು. ದೇಶದಲ್ಲಿ ನಡೆಯುತ್ತಿರುವ ಈಗಿನ ಅವ್ಯಹಾರ ವಿದ್ಯಮಾನದಿಂದ ಜನತೆ ಕಂಗೆಟ್ಟಿದೆ. ಪ್ರಸಕ್ತ ಕೊರೊನಾ ಸಂದರ್ಭದಲ್ಲೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಬಡಜನರ ಸುಲಿದು ತಿನ್ನುವ ತಂತ್ರ ರೂಪಿಸಿದೆ ಎಂದು ಮಾಜಿ ಶಾಸಕ ಮೊೈದಿನ್ ಬಾವ ಆರೋಪಿಸಿದರು.
ಗಂಜಿಮಠದ ಪ್ರಾಥಮಿಕ ಉರ್ದು ಶಾಲೆಯಲ್ಲಿ ಅ. 13ರಂದು ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಗಂಜಿಮಠ ಗ್ರಾಪಂ ಮಾಜಿ ಸದಸ್ಯ ಬಾಷಾ ಮಾಸ್ಟರ್ ಮುಂದಾಳತ್ವದಲ್ಲಿ ಮಂಗಳೂರು ಒನ್ ಹಾಗೂ ಸಿಎಫ್ಸಿ ಕ್ಲಬ್ ಸೂರಲ್ಪಾಡಿ ಜಂಟಿ ಆಶ್ರಯದಲ್ಲಿ ಗಂಜಿಮಠ ಪಂಚಾಯತ್ ಮಟ್ಟದಲ್ಲಿ ಆಯೋಜಿಸಲಾದ ಆಧಾರ್ ಕಾರ್ಡ್, ಗುರುತಿನ ಚೀಟಿ ಪರಿಷ್ಕರಣೆ, ಆಯುಷ್ಮಾನ್ ಭಾರತ್ ಹಾಗೂ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ಧನ್ ಪಿಂಚಣಿ ಯೋಜನೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಾಷಾ ಮಾಸ್ಟರ್ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿ, ಮೊೈದಿನ್ ಬಾವಾ ಶಾಸಕರಾಗಿದ್ದ ಸಂದರ್ಭದಲ್ಲಿ ಗಂಜಿಮಠ ಭಾಗದಲ್ಲಿ ನಡೆದಿದ್ದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿ, ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಡಜನರ ಕ್ಷೇಮಾಭಿವೃದ್ಧಿ ಮತ್ತು ಕ್ಷೇತ್ರಾಭಿವೃದ್ಧಿ ಬಯಸಿರುವ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಮೊೈದಿನ್ ಬಾವಾ, ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯ ಜಿ ಸುನಿಲ್, ಗಂಜಿಮಠ ಗ್ರಾಪಂ ಮಾಜಿ ಉಪಾಧ್ಯಕ್ಷ ಜಾಕಿರ್, ಪಿ ಬಿ ಬಶೀರ್, ಅಬ್ದುಲ್ ಶುಕೂರ್, ಸಾದಿಕ್, ನಾಬರ್ಟ್ ಕ್ರಾಸ್ತಾ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಯಾಸಿರ್ ಮಣಿ, ಜಯಂತ್ ಶೆಟ್ಟಿಗಾರ್, ಅಬೂಬಕ್ಕರ್ ಗಂಜಿಮಠ, ಸಂತೋಷ್, ಹನೀಫ್, ಇಲ್ಯಾಸ್ ಮತ್ತಿತರರು ಉಪಸ್ಥಿತರಿದ್ದರು. ಬಾಷಾ ಮಾಸ್ಟರ್ ನಿರೂಪಿಸಿ ವಂದಿಸಿದರು