ಪೊಳಲಿ:ಯಕ್ಷಕಲಾ ಪೊಳಲಿ ಇದರ ರಜತ ಸಂಭ್ರಮದ ಅಂಗವಾಗಿ ಯಕ್ಷೋತ್ಸವ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ಅ.17ರಂದು ಶನಿವಾರ ಸಂಜೆ ಗಂಟೆ 6 ರಿಂದ ರಾತ್ರಿ 2 ಗಂಟಯತನಕ ನಡೆಯಲಿದೆ.
ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಭಾಕಾರ್ಯಕ್ರಮ:
* ಪುಣ್ಯ ಸ್ಮರಣೆ:
ಕೃಷ್ಣೈಕ್ಯರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತಿ ಶ್ರೀ ಪಾದಂಗಳವರು ( ಮಠಾದೀಶರು ಶ್ರೀಮದೆಡನೀರು ಮಠ ಕಾಸರಗೋಡು)
ಕೀರ್ತಿಶೇಷ ಡಾ.ಎನ್ ನಾರಾಯಣಶೆಟ್ಟಿ ಶಿಮಂತೂರು
(ಅಭಿನವ ನಾಗವರ್ಮ ಬಿರುದಾಂಕಿತ ಹಿರಿಯ ಭಾಂದವರು)
ಸಂಸ್ಕರಣಾ ಭಾಷಣವನ್ನು ಯಕ್ಷಗಾನ ವಿದ್ವಾಂಸ ಉಜಿರೆ ಅಶೋಕ ಭಟ್ ಮಾಡಲಿದ್ದಾರೆ.
* ಸನ್ಮಾನ ಕಾರ್ಯಕ್ರಮ:
ಶ್ರೀ ದುರ್ಗಾಂಬಿಕಾ ಸದ್ದೇಶ್ವರೀ ದೇವಸ್ಥಾನ ಸುವರ್ಣನಾಡು ಧರ್ಮದರ್ಶಿ ವಿಶ್ವನಾಥ ಶೆಟ್ಟಿ ಸುವರ್ಣಡು, ಶ್ರೀ ಕಟೀಲು ಮೇಳ ಭಾಗವತ ಬಲಿಪ ಪ್ರಸಾದ್ ಭಟ್, ಹಿಮ್ಮೇಳ ವಾದಕ ,ಪದ್ಮನಾಭ ಉಪಾಧ್ಯಾಯ,ಹಿರಿಯ ಕಲಾವಿದರಾದ ರಘುನಾಥ ಶೆಟ್ಟಿ ಬಾಯಾರು ,ಬೆಳ್ಳಾರೆ ಮಂಜುನಾಥ ಭಟ್, ಸುಬ್ರಾಯ ಹೊಳ್ಳ ಕಾಸರಗೋಡು, ಸರವು ರಮೇಶ್ ಭಟ್,ರವಿ ಅಲೆವೂರಾಯ ವರ್ಕಾಡಿ,ಜಯಪ್ರಕಾಶ್ ಶೆಟ್ಟಿ ಪೆರ್ಮುದೆ,ಖ್ಯಾತ ಯಕ್ಷಗಾನ ಸಂಘಟಕಬಿ.ಜನಾರ್ಧನ ಅಮುಂಜೆ ಇವರುಗಳನ್ನು ಈ ವೇದಿಕೆಯಲ್ಲಿ ಸನ್ಮಾನಿಸಲಿದ್ದಾರೆ. ಅಭಿನಂದನಾ ಭಾಷಣವನ್ನು ಲ/ಕದ್ರಿ ನವನೀತ ಶೆಟ್ಟಿ ಮಾಡಲಿದ್ದಾರೆ.
*”ಧ್ವನಿ ಸುರುಳಿ ಬಿಡುಗಡೆ”
ವೇದಮೂರ್ತಿಪೊಳಲಿ ಶ್ರೀ ಅನಂತ ಭಟ್ ವಿರಚಿತ ಗೀತಾರ್ಚನೆ ಪುಸ್ತಕದಿಂದ ಆಯ್ದ ಹಾಡುಗಳನ್ನು ಪತ್ತೂರು ನರಸಿಂಹ ನಾಯಕ್ ಮತ್ತು ಬಳಗ ಹಾಡಿದ್ದಾರೆ.
*ಗೌರವಾರ್ಪಣೆ:
ಯಕ್ಷ ಕಲಾ ಪೊಳಲಿಯಲ್ಲಿ 25 ವರ್ಷಗಳಿಂದ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಹಾಗೂ ಸ್ಥಳೀಯ ಸದಸ್ಯರಿಗೆ ಗೌರವಾರ್ಪಣೆ ನಡೆಯಲಿದೆ.
ರಾತ್ರಿ ಗಂಟೆ 8 ರಿಂದ ತಾತ್ರಿ 2ಗಂಟೆಯ ತನಕ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ “ಮಾತಂಗ ಕನ್ಯೆ”-“ಶ್ರೀ ರಾಮ ದರ್ಶನ” ನಡೆಯಲಿದೆ.