ಬಂಟ್ವಾಳ:ಯಕ್ಷಕಲಾ ಪೊಳಲಿ ಇದರ ರಜತ ಸಂಭ್ರಮದ ಪ್ರಯುಕ್ತ ಯಕ್ಷೋತ್ಸವವು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಲ್ಲಿ ಶನಿವಾರ ಸಂಜೆ ನಡೆಯಿತು. ಇದೇವೇಳೆ ಕೃಷ್ಣೈಕ್ಯರಾದ ಎಡನೀರು ಮಠಾಧೀಶರಾಗಿದ್ದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ,ಕೀರ್ತಿಶೇಷ ಡಾ.ಎನ್ .ನಾರಾಯಣಶೆಟ್ಟಿ ಶಿಮಂತೂರು ಅವರ ಕುರಿತು ಯಕ್ಷಗಾನ ವಿದ್ವಾಂಸ ಉಜಿರೆ ಅಶೋಕ ಭಟ್ ರವರು ಸಂಸ್ಮರಣೆಗೈದರು.
ಸನ್ಮಾನ : ಸುವರ್ಣನಾಡು ಶ್ರೀ ದುರ್ಗಾಂಬಿಕಾ ಸಿದ್ದೇಶ್ವರೀ ದೇವಸ್ಥಾನದ ಧರ್ಮದರ್ಶಿ ವಿಶ್ವನಾಥ ಶೆಟ್ಟಿ ಸುವರ್ಣನಾಡು, ಶ್ರೀ ಕಟೀಲು ಮೇಳ ಭಾಗವತ ಬಲಿಪ ಪ್ರಸಾದ್ ಭಟ್, ಹಿಮ್ಮೇಳ ವಾದಕ ಪದ್ಮನಾಭ ಉಪಾಧ್ಯಾಯ,ಹಿರಿಯ ಕಲಾವಿದರಾದ ರಘುನಾಥ ಶೆಟ್ಟಿ ಬಾಯಾರು ,ಬೆಳ್ಳಾರೆ ಮಂಜುನಾಥ ಭಟ್, ಸುಬ್ರಾಯ ಹೊಳ್ಳ ಕಾಸರಗೋಡು, ಸರವು ರಮೇಶ್ ಭಟ್,ರವಿ ಅಲೆವೂರಾಯ ವರ್ಕಾಡಿ,ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಯಕ್ಷಗಾನ ಸಂಘಟಕ ಬಿ.ಜನಾರ್ಧನ ಅಮ್ಮುಂಜೆ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 
ಲ.ಕದ್ರಿ ನವನೀತ ಶೆಟ್ಟಿ ಅಭಿನಂದನಾ ಭಾಷಣಗೈದರು. ಹಾಗೆಯೇ ಪೊಳಲಿ ಯಕ್ಷ ಕಲಾ ಸಂಸ್ಥೆಯಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸಿದ ಹಿರಿಯ ಕಲಾವಿದರಿಗೆ ಹಾಗೂ ಸ್ಥಳೀಯ ಸದಸ್ಯರನ್ನು ಗೌರವಿಸಲಾಯಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ,ಪೊಳಲಿ ಶ್ರೀರಾಮಕೃಷ್ಣ ತಪೋವನದ ಅಧ್ಯಕ್ಷ ವಿವೇಕ ಚೈತಾನ್ಯಾನಂದ ಸ್ವಾಮೀಜಿ ,ಪೊಳಲಿ ಕ್ಷೇತ್ರದ ಪ್ರದಾನ ಅರ್ಚಕ ವೇ.ಮೂ.ಮಾಧವಭಟ್,ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ,ನಿವೃತ್ತ ಪ್ರಾಂಶುಪಾಲರಾದ ಶಂಕರಶೆಟ್ಟಿ ಗುಂಡಿಲಗುತ್ತು,ಉದ್ಯಮಿಗಳಾದ ಸೇಸಪ್ಪಕೋಟ್ಯಾನ್ ಪಚ್ಚಿನಡ್ಕ,ಗಣೇಶ್ ಶೆಟ್ಟಿ ಪರಾರಿ,ಆರ್ ಎಸ್.ಎಸ್.ನ ಪುತ್ತೂರು ಜಿಲ್ಲಾ ಸಂಘಚಾಲಕ ಕೊಡ್ಮಾಣ್ ಕಾಂತಪ್ಪ ಶೆಟ್ಟಿ,ತಾಪಂ ಸದಸ್ಯ ಯಶವಂತ ಪೂಜಾರಿ,ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ ಪೊಳಲಿ, ಸುಬ್ರಾಯ ಕಾರಂತ್,ಅ.ನ.ಭ ಪೊಳಲಿ,ಲೋಕೇಶ್ ಭರಣಿ ಪೊಳಲಿ,ಯಶೋಧರ ಕಲ್ಕಟ, ನವೀನ್ ಪೊಳಲಿ, ಸೇಸಪ್ಪ ಮೊದಲಾದವರು ವೇದಿಕೆಯಲ್ಲಿದ್ದರು.
*ಧ್ವನಿ ಸುರುಳಿ ಬಿಡುಗಡೆ”

ವೇದಮೂರ್ತಿಪೊಳಲಿ ಶ್ರೀ ಅನಂತ ಭಟ್ ವಿರಚಿತ ಗೀತಾರ್ಚನೆ ಪುಸ್ತಕದಿಂದ ಆಯ್ದ ಹಾಡುಗಳ ಧ್ವನಿಸುರಳಿ ಬಿಡುಗಡೆಗೊಳಿಸಲಾಯಿತು.ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ “ಮಾತಂಗ ಕನ್ಯೆ”-“ಶ್ರೀ ರಾಮ ದರ್ಶನ” ನಡೆಯಲಿದೆ.ತಾಪಂ ಮಾಜಿ ಸದಸ್ಯ ವೆಂಕಟೇಶ್ ನಾವುಡ ಸ್ವಾಗತಿಸಿ,ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿ ,ವಂದಿಸಿದರು.
