ಕೈಕಂಬ:ನೂರುಲ್ ಇಸ್ಲಾಂ ಜುಮಾ ಮಸೀದಿ ಗುಂಡಿಕುಮೇರು ಕರಿಯಂಗಳ ಪಲ್ಲಿಪಾಡಿ ಇದರ ವಾರ್ಷಿಕ ಮಹಾಸಬೆಯು ಮದರಸ ಸಭಾಂಗಣದಲ್ಲಿ ಖತೀದರಾದ ಬಹು ಶರೀಫ್ ಇಮ್ದಾದಿ ಯವರ ದುವಾ ದೊಂದಿಗೆ ಮರ್ಹೂಮ್ ಆದಂ ಉಸ್ತಾದರ ಸುಪುತ್ರ ಮುಹಮ್ಮದ್ ಕುಂಞಿ ಮಾಸ್ಟರ್ ರವರ ಸಭಾ ಅದ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯದರ್ಶಿ ಮುಹಮ್ಮದ್ ಕೆ.ಎಸ್ ಸ್ವಾಗತಿಸಿ ಲೆಕ್ಕಪತ್ರವನ್ನು ಮಂಡಿಸಿದರು2020-21ರ ನೂತನ ಆಡಳಿತ ಮಂಡಳಿ ಸದಸ್ಯರನ್ನು ಆಯ್ಕೆಮಾಡಲಾಯಿತು.
ಗೌರವಾದ್ಯಕ್ಷರಾಗಿ ಮುಹಮ್ಮದ್ ಕುಂಞಿ ಮಾಸ್ಟರ್ ಅಡ್ಡೂರು, ಅಧ್ಯಕ್ಷರಾಗಿ ಉಸ್ಮಾನ್ ಕರಿಯಂಗಳ, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಕೆ.ಎಸ್, ಕೋಶಾಧಿಕಾರಿಯಾಗಿ ಬದ್ರುದ್ದೀನ್ ಗುಂಡಿಕುಮೇರ್, ಉಪಾಧ್ಯಕ್ಷರಾಗಿ ಅಬ್ದುಲ್ ಸಲಾಂ, ಜೊತೆ ಕಾರ್ಯದರ್ಶಿ ಯಾಗಿ ಮುಹಮ್ಮದ್ ಕೆ.ಎಸ್ ನಿರ್ದೇಶಕರುಗಳಾಗಿ ಅಬ್ದುಲ್ ಬಸೀರ್ ಕೆ.ಎಸ್, ಸೈಯ್ಯದ್ ಆಲಿ ಕೆ.ಎಸ್, ಹಾಗೂ ಒಂಬತ್ತೂ ಕಾರ್ಯಕಾರಿ ಸದಸ್ಯರನ್ನು ಆಯ್ಕೆಮಾಡಲಾಯಿತು ಎಂದು ನಿಯಾಜ್ ಗುಂಡಿಕುಮೇರು ಪ್ರಕಟನೆಣೆಯಲ್ಲಿ ತಿಳಿಸಿದ್ದಾರೆ.