ಬಂಟ್ವಾಳ : ರಾಷ್ಟ್ರ ಸೇವೆಯಲ್ಲಿ ತೊಡಗುವ ಮಹದಾಸೆಯಿಂದ ಕಾಲೇಜು ದಿನಗಳಲ್ಲಿ ಈ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳಾಗಿ ಬೆಳೆಯುತ್ತಿರುವುದು ಅಭಿನಂದನಾರ್ಹ . ಭ್ರೂಣದಿಂದ ಆರಂಭವಾಗುವ ಹಕ್ಕು ಸತ್ತ ನಂತರವೂ ಅನ್ವಯಿಸುವ ಹಕ್ಕುಗಳವರೆಗೆ ಕಾನೂನು ಅನ್ವಯಿಸುತ್ತದೆ ಎಂದು ಗೌ.ಪ್ರ . ಸಿವಿಲ್ ನ್ಯಾಯಾಧೀಶರಾದ ಜಯಪ್ರಕಾಶ್ ಡಿ ಆರ್ ನುಡಿದರು .
KAR_3835

ಅವರು ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ , ವಕೀಲರ ಸಂಘ ಬಂಟ್ವಾಳ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸರಕಾರಿ ಪದವಿಪೂರ್ವ ಕಾಲೇಜು ಮುಡಿಪು ಇದರ ಜಂಟಿ ಆಶ್ರಯದಲ್ಲಿ ಇರಾ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಅ. 14 ರಂದು ಮಂಗಳವಾರ ಕಾನೂನು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು .

ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಶಿವಪ್ರಕಾಶ್ ಜೈನ್ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿಯಿತ್ತರು . ಕುರ್ನಾಡು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಂಶುಪಾಲ ಅಷ್ಪಾಕ್ ಅಹಮ್ಮದ್ ಎ.ಮ್ಯಾಗೇರಿ ಅಧ್ಯಕ್ಷತೆ ವಹಿಸಿದ್ದರು . ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಕಾರ್ಯಧ್ಯಕ್ಷ ಚಂದ್ರಶೇಖರ ಕರ್ಕೇರ , ಬಂಟ್ವಾಳ.ಠಾಣೆ ಉಪನಿರೀಕ್ಷಕ ಜಯಕರ ಗೌಡ , ನ್ಯಾಯವಾದಿಗಳಾದ ರವೀಂದ್ರ ಕುಕ್ಕಾಜೆ , ಸುರೇಶ್ ಕುಮಾರ್ ನಾವೂರು , ಸತೀಶ್ ಬಿ., ಘಟಕದ ನಾಯಕಿ ಟೀಷಾ ಡಿಸೋಜ ಉಪಸ್ಥಿತರಿದ್ದರು .

ಕಾರ್ಯದರ್ಶಿ ಪುಂಚಮೆ ಚಂದ್ರಶೇಖರ ರಾವ್ ಪ್ರಸ್ತಾವನೆಗೈದರು . ಶಿಬಿರಾರ್ಥಿಗಳಾದ ವಿನುತಾ ಸ್ವಾಗತಿಸಿ .ಅಮೃತಾ ವಂದಿಸಿ , ದಿನೇಶ್ ಜಿ.ಕೈರಂಗಳ ಕಾರ್ಯಕ್ರಮ ನಿರೂಪಿಸಿದರು .

By suddi9

Leave a Reply

Your email address will not be published. Required fields are marked *