ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡ್ನಿಂದ ಕಳೆದ ಭಾನುವಾರ ರಾತ್ರಿ ಉದ್ಯಮಿಯೊಬ್ಬರನ್ನು ಅಪಹರಿಸಿದ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಮಂಗಳವಾರ ಬಂಧಿಸಿದ್ದಾರೆ.

ಆರೋಪಿಗಳನ್ನು ಮಂಗಳೂರಿನ ಸೋಮೇಶ್ವರ ನಿವಾಸಿಗಳಾದ ಚೇತನ್, ನಿವೇಶ್ ಮತ್ತು ಅಂಗ್ಲಮೊಗರು ನಿವಾಸಿ ಪ್ರಜ್ವಲ್ ಕುತ್ತಾರ್ ಎಂದು ಗುರುತಿಸಲಾಗಿದ್ದು, ಇವರನ್ನು ಮಂಗಳವಾರ ಬೆಳಿಗ್ಗೆ ಮಂಗಳೂರಿನ ಪಂಪ್ವೆಲ್ ಬಳಿ ಬಂಧಿಸಿರುವುದಾಗಿ ನಗರ ಪೊಲೀಸರು ತಿಳಿಸಿದ್ದಾರೆ.ಇಲ್ಲಿನ ಸರಪಾಡಿ ಸಮೀಪದ ದೇವಸ್ಯಮೂಡೂರು ನಿವಾಸಿ ರಾಮಕೃಷ್ಣ ಮಯ್ಯ ಎಂಬವರ ಪುತ್ರ ಅನೂಪ್ರಾಜ್ ಅವರು ಪಾಣೆಮಂಗಳೂರಿನ ಮೊಗನರ್ಾಡು ಎಂಬಲ್ಲಿ ಹೋಲೋಬ್ಲಾಕ್ ಉದ್ಯಮ ನಡೆಸುತ್ತಿದ್ದಾರೆ.

ಈ ನಡುವೆ ಇವರು ಮಂಗಳೂರಿನ ಹಲವರಿಂದ ಸುಮಾರು ಐದು ಲಕ್ಷ ಮೊತ್ತದ ಬಡ್ಡಿ ಹಣ ಸಾಲ ಪಡೆದು ಬಳಿಕ ಹಿಂತಿರುಗಿಸಿಲ್ಲ ಎನ್ನಲಾಗಿದೆ. ಇದರಿಂದಾಗಿ ಸಾಲ ವಸೂಲಾತಿ ನೆಪದಲ್ಲಿ ಅವರನ್ನು ಆರೋಪಿಗಳು ಕಾರಿನಲ್ಲಿ ಬಂದು ಅಪಹರಿಸಿದ್ದಾರೆ ಎಂದು ರಾಮಕೃಷ್ಣ ಮಯ್ಯ ಪೊಲೀಸರಿಗೆ ದೂರಿಕೊಂಡಿದ್ದರು ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *