ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಕೊಯಿಲ ಎಂಬಲ್ಲಿ ಸ್ಟೀಲ್ ಕಪಾಟು ನಿಮರ್ಿಸುತ್ತಿರುವ ವಕರ್್ಶಾಪ್ನಲ್ಲಿ ಸಂಗ್ರಹಿಸಿಡಲಾಗಿದ್ದ ಅಪಾರ ಮೌಲ್ಯದ ವಿದೇಶಿ ನೋಟುಗಳನ್ನು ಇಲ್ಲಿನ ಸಿಬ್ಬಂದಿಯೇ ಕಳವು ನಡೆಸಿ ಪರಾರಿಯಾದ ಘಟನೆ ಗುರುವಾರ ನಡೆದಿದೆ.
ಇಲ್ಲಿನ ನಿವಾಸಿ ಶರತ್ ಎಂಬವರು ನಡೆಸುತ್ತಿರುವ ಸ್ಟೀಲ್ ಕಪಾಟು ತಯಾರಿ ಘಟಕದಲ್ಲಿ ಮೈಸೂರಿನ ಮೂವರು ಸಿಬ್ಬಂದಿಗಳಿದ್ದು, ಈ ಪೈಕಿ ಮೈಸೂರಿನ ಉಸ್ಮಾನ್ ಎಂಬಾತನು ಗುರುವಾರ ಮುಂಜಾನೆಯಿಂದಲೇ ಪರಾರಿಯಾಗಿದ್ದಾನೆ. ಸುಮಾರು ರೂ 10 ಸಾವಿರ ಮೊತ್ತದ ನಗದು ಸಹಿತ ರೂ 25ಸಾವಿರ ಮೌಲ್ಯದ ವಿದೇಶಿ ಕರೆನ್ಸಿ ಎಗರಿಸಿ ಪರಾರಿಯಾಗಿದ್ದಾನೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.