ಬಂಟ್ವಾಳ: ಪ್ರತಿಯೋರ್ವನಲ್ಲಿ ಆತ್ಮ ಶಕ್ತಿಯ ಜೊತೆ ಕಲಾ ಶಕ್ತಿ ಇದ್ದು ಅದರ ಉದ್ದೀಪನವಾದಾಗ ಆತ ಪರಿಪೂರ್ಣವಾಗಿ ಮಿಂಚಲು ಅವಕಾಶವಾಗುತ್ತದೆ. ಕಲೆ ಎಂಬುದು ಆರಾಧನೆಯಾಗಿದ್ದು ಶ್ರದ್ಧೆ , ನಿಷ್ಠೆ , ಭಕ್ತಿ , ಆಸಕ್ತಿಯಿಂದ ಅದರಲ್ಲಿ ತೊಡಗಿಸಿಕೊಂಡಾಗ ದೇವರ ಅನುಗ್ರಹವಾಗಿ ಕಲೆ ಒಲಿಯುತ್ತದೆ ಎಂದು ಚಲನಚಿತ್ರ ನಟ, ಹಿರಿಯ ರಂಗ ಕಲಾವಿದ ಡಿ.ಎಸ್.ಬೋಳೂರು ಅವರು ಹೇಳಿದರು.

1 (6)

ಅವರು ಶುಕ್ರವಾರ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ವತಿಯಿಂದ ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ಇವರ ಆಶ್ರಯದಲ್ಲಿ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರಮಂಡಳಿ ಸಭಾಂಗಣದಲ್ಲಿ ಜರಗಿದ ತುಳು ನಾಟಕ ನಟನಾ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ತುಳು ಭಾಷೆಯ ಬೆಳವಣಿಗೆಗೆ ತುಳು ರಂಗಭೂಮಿಯ ಕೊಡುಗೆ ಅಪಾರವಾಗಿದ್ದು ತುಳು ರಂಗಭೂಮಿಯನ್ನು ಉಳಿಸಿ ಬೆಳೆಸುವಲ್ಲಿ ಸಂಘ ಸಂಸ್ಥೆಗಳು ಸಹಕರಿಸಬೇಕು. ತುಳು ಭಾಷೆ, ಸಂಸ್ಕೃತಿಗೆ ಉತ್ತೇಜನ ನೀಡುವ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಕಾರ್ಯ ಶ್ಲಾಘನೀಯ. ಗ್ರಾಮೀಣ ಪ್ರದೇಶದ ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡುವಲ್ಲಿ ತುಳು ಸಾಹಿತ್ಯ ಅಕಾಡೆಮಿ ಸದಾ ಸಿದ್ಧವಾಗಿದೆ ಎಂದು ಹೇಳಿದರು.
ಪಿಲಾತಬೆಟ್ಟು ಗ್ರಾ.ಪಂ.ಪಂ.ಅ.ಅಕಾರಿ ಧರ್ಮಪಾಲ ಪೂಜಾರಿ, ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಗೌರವಾಧ್ಯಕ್ಷ ರಮೇಶ್ ಮೂಲ್ಯ ,ಮಿತ್ರ ಮಂಡಳಿ ಅಧ್ಯಕ್ಷ ಸಂತೋಷ್ ಮೂಜರ್ೆ, ಶ್ರೀ ಮುರುಘೇಂದ್ರ ವನಿತಾ ಸಮಾಜದ ಅಧ್ಯಕ್ಷೆ ಉಮಾ ಡಿ.ಗೌಡ, ಸಂಪನ್ಮೂಲ ವ್ಯಕ್ತಿಗಳಾದ ಹಿರಿಯ ರಂಗ ತಜ್ಞ ಜಗನ್ ಪವಾರ್ ಬೇಕಲ್, ರಂಗ ಕಲಾವಿದ ರತ್ನದೇವ್ ಪುಂಜಾಲಕಟ್ಟೆ ಉಪಸ್ಥಿತರಿದ್ದರು.
ಮಿತ್ರ ಮಂಡಳಿಯ ಕೋಶಾಕಾರಿ ರಾಜೇಂದ್ರ ಕೆ.ವಿ. ಅವರು ಸ್ವಾಗತಿಸಿದರು. ಶಿಬಿರಾಕಾರಿ ಮಂಜು ವಿಟ್ಲ ಪ್ರಸ್ತಾವಿಸಿದರು. ರಾಜೇಶ್ ಪುಳಿಮಜಲು ವಂದಿಸಿದರು. ರಂಗ ಕಲಾವಿದ ಹೆಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *