ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ನೇತ್ರಾವತಿ ಸೇತುವೆಯಡಿ ನದಿಗೆ ಈಜಲು ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಲ್ಲಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

 

17-5
17-4

17-1

17-2

ಮೃತರನ್ನು ಬಂಟ್ವಾಳ ತಾಲ್ಲೂಕಿನ ನೆತ್ರಕೆರೆ ನಿವಾಸಿ ಮಿಥುನ್ (22) ಎಂದು ಗುರುತಿಸಲಾಗಿದೆ.ಅಡ್ಯಾರು ಸಹ್ಯಾದ್ರಿ ಕಾಲೇಜಿನಲ್ಲಿ ಲ್ಯಾಬ್ಟೆಕ್ನಿಶನ್ ಆಗಿ ಉದ್ಯೋಗದಲ್ಲಿರುವ ಮಿಥುನ್ ತನ್ನ ಸ್ನೇಹಿತರಾದ ರಜನೀಶ್, ಕರಣ್, ನಾಗೇಶ್, ನಿತೇಶ್ ಇವರೊಂದಿಗೆ ಶುಕ್ರವಾರ ಸಂಜೆ ಈಜುವುದಕ್ಕಾಗಿ ನದಿಗೆ ಇಳಿದಿದ್ದರು ಎನ್ನಲಾಗಿದೆ.

ಇದೇ ವೇಳೆ ಸರಿಯಾಗಿ ಈಜಲು ಬಾರದ ಮಿಥುನ್ ನದಿ ನೀರಿನ ಸೆಳೆತಕ್ಕೆ ಮರಳಿನಲ್ಲಿ ಕಾಲು ಜಾರಿ ಆಳ ಪ್ರದೇಶದಲ್ಲಿ ಮುಳುಗಿದ್ದಾರೆ. ತಕ್ಷಣವೇ ಜೊತೆಗಿದ್ದ ಸ್ನೇಹಿತರು ಆತನನ್ನು ರಕ್ಷಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗದೆ ಸಾವನ್ನಪ್ಪಿದ್ದಾರೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ. ಎಎಸ್ಪಿ ರಾಹುಲ್ ಕುಮಾರ್, ನಗರ ಠಾಣಾಧಿಕಾರಿ ನಂದಕುಮಾರ್ ಮತ್ತಿತರರು ಧಾವಿಸಿ ಸ್ಥಳಪರಿಶೀಲನೆ ನಡೆಸಿದ್ದಾರೆ.

ತಾಲ್ಲೂಕಿನ ಪಾಣೆಮಂಗಳೂರು ನೇತ್ರಾವತಿ ಸೇತುವೆಯಡಿ ನದಿಯಲ್ಲಿ ಶುಕ್ರವಾರ ಸಂಜೆ ಈಜಲು ಹೋಗಿದ್ದ ನೆತ್ರಕೆರೆ ನಿವಾಸಿ ಮಿಥುನ್(22) ಎಂಬವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸ್ಥಳೀಯರು ಕುತೂಹಲದಿಂದ ಜಮಾಯಿಸಿದ್ದರು.

By suddi9

Leave a Reply

Your email address will not be published. Required fields are marked *