ಬಂಟ್ವಾಳ: ಬ್ರಹ್ಮರಕೂಟ್ಲುವಿನ ಬ್ರಹ್ಮ ಸನ್ನಿಧಿಯ ಎದುರುಗಡೆ ಹಿಂದೂ ಸೇವಾ ಸಂಘದ ಆಶ್ರಯದಲ್ಲಿ ಪ್ರಗತಿಪರ ಕೃಷಿಕರಾದ ಉಳಿಪಾಡಿಗುತ್ತು ರಾಜೇಶ್ ನಾಯ್ಕ್ರವರ ಮಾರ್ಗದರ್ಶನದಲ್ಲಿ ನ. 23 ರಂದು ತುಳುನಾಡ ಕೃಷಿ ಕ್ರಾಂತಿ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದೆ. ಇದರ ಪೂರ್ವಭಾವಿಯಾಗಿ ನೇಜಿ ನೆಡುವ ಕುಪ್ಪಿಲಗುತ್ತು ಕನಪಾಡಿತ್ತಾಯ ಚಾವಡಿಯ ಗದ್ದೆಯನ್ನು ಉಳುಮೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು,
ಕೃಷಿಕರಾದ ದಯಾನಂದ ಶೆಟ್ಟಿ ಪರಾರಿ, ಸೀತಾರಾಮ ಅತಿಕಾರಿ, ದಯಾನಂದ ಕುಪಿಲ, ದಿವಾಕರ ಶೆಟ್ಟಿ ಕುಪಿಲಗುತ್ತು, ಶ್ರೀಧರ ಪೂಜಾರಿ ಕುಪ್ಪಿಲ, ಚರಣ್ ಜುಮಾದಿಗುಡ್ಡೆ, ದೇವಪ್ಪ ಶೆಟ್ಟಿ, ರಾಮನಾಥ ರಾಯಿ, ಭಾಸ್ಕರ್ ರೈ, ಗಣೇಶ್ ದಾಸ್, ಸತೀಶ್ ಶೆಟ್ಟಿ, ರಾಮಚಂದ್ರ ಶೆಟ್ಟಿ, ಯೋಗೀಶ್ ಕುಪ್ಪಲ, ಗಣೇಶ್ ರೈ ಮಾಣಿ, ಮಹೇಶ್ ಶೆಟ್ಟಿ , ಪುಷ್ಪರಾಜ್ ಚೌಟ ಮಾಣಿ ಮತ್ತು ಊರ ಪ್ರಮುಖರು ಉಪಸ್ಥಿತರಿದ್ದರು.

