ಬಂಟ್ವಾಳ: ಕಾಲಕಾಲಕ್ಕೆ ಬದಲಾಗುತ್ತಿರುವ ಪ್ರೇಕ್ಷಕರ ಆಸಕ್ತಿ , ಅಭಿರುಚಿಯನ್ನು ಗಮನದಲ್ಲಿರಿಸಿ ಸಾರ್ವಕಾಲಿಕ ಮೌಲ್ಯದ ಮತ್ತು ಸಮಾಜದ ಎಲ್ಲಾ ವರ್ಗದವರ ಹಿತರಕ್ಷಣೆ ಮಾಡಿ ಜಾಗೃತಿಗೊಳಿಸುವ ನಾಟಕಗಳು ರಂಗಭೂಮಿಯಲ್ಲಿರಬೇಕು ಎಂದು ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಅವರು ಹೇಳಿದರು.
ಅವರು ಅ.19ರಂದು ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ವತಿಯಿಂದ ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿ ಇವರ ಆಶ್ರಯದಲ್ಲಿ ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರಮಂಡಳಿ ಸಭಾಂಗಣದಲ್ಲಿ ಅ.17ರಿಂದ ಅ.19ರ ವರೆಗೆ ಜರಗಿದ ತುಳು ನಾಟಕ ನಟನಾ ಕಮ್ಮಟದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
2 (3)

1 (4)
ವಿನಯಶೀಲತೆ, ಸೌಜನ್ಯದ ಗುರು-ಶಿಷ್ಯ ಸಂಬಂಧ ಕಲಾವಿದರ ವಿಶೇಷ ಗುಣವಾಗಿದ್ದು ಸದಾ ಕಲಿಯುವ ತುಡಿತ ಮತ್ತು ಜೀವನಾನುಭವ ಕಲಾವಿದರಿಗೆ ಪರಿಪಕ್ವತೆ ನೀಡುತ್ತದೆ ಎಂದು ಅವರು ನುಡಿದರು.
ಶಿಬಿರದ ಸಂಪನ್ಮೂಲ ವ್ಯಕ್ತಿ, ಹಿರಿಯ ರಂಗ ತಜ್ಞ ಜಗನ್ ಪವಾರ್ ಬೇಕಲ್ ಅವರು ಮಾತನಾಡಿ ತಾನು ಸ್ವಸ್ಥವಾಗಿದ್ದು ಸ್ವಸ್ಥ ಸಮಾಜದ ನಿಮರ್ಾಣಕ್ಕೆ ರಂಗಭೂಮಿ ಸಹಾಯಕವಾಗಿದೆ. ರಂಗಭೂಮಿಯಿಂದ ವ್ಯಕ್ತಿತ್ವ ವಿಕಸನಗೊಂಡು ಭಾವನಾತ್ಮಕ ಸಂಬಂಧಗಳು ಗಟ್ಟಿಯಾಗುತ್ತವೆ. ನಟನೆ ಎಂಬುವುದು ಯಾವುದೇ ಸ್ಥಾಪಿತ ಹಿತಾಸಕ್ತಿಗಳ ಆಸ್ತಿಯಲ್ಲ . ಅನುಭವವನ್ನು ಅನಾವರಣಗೊಳಿಸುವುದೇ ನಟನೆ, ಯುವಜನತೆಯ ಕ್ರಿಯಾಶೀಲತೆಗೆ , ಪ್ರತಿಭಾ ವಿಕಸನಕ್ಕೆ ರಂಗಭೂಮಿ ಪೂರಕವಾಗಿದೆ ಎಂದು ಹೇಳಿದರು.
ಹಿರಿಯ ನಾಟಕಕಾರ ಪಿ.ಕೆ.ಟೈಲರ್, ಶಿಬಿರಾಕಾರಿ ಮಂಜು ವಿಟ್ಲ , ಪಿಲಾತಬೆಟ್ಟು ಗ್ರಾ.ಪಂ.ಸದಸ್ಯ ಚಂದ್ರಶೇಖರ ಶೆಟ್ಟಿ , ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಗೌರವಾಧ್ಯಕ್ಷ ರಮೇಶ್ ಮೂಲ್ಯ ,ಮಿತ್ರ ಮಂಡಳಿ ಅಧ್ಯಕ್ಷ ಸಂತೋಷ್ ಮೂಜರ್ೆ, ಶ್ರೀ ಮುರುಘೇಂದ್ರ ವನಿತಾ ಸಮಾಜದ ಅಧ್ಯಕ್ಷೆ ಉಮಾ ಡಿ.ಗೌಡ, ಸಂಪನ್ಮೂಲ ವ್ಯಕ್ತಿ, ರಂಗ ಕಲಾವಿದ ರತ್ನದೇವ್ ಪುಂಜಾಲಕಟ್ಟೆ , ರಂಗ ನಿದರ್ೇಶಕ ಬಿ.ಆರ್.ಅಂಚನ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಗನ್ಪವಾರ್ ಬೇಕಲ್ ಅವರನ್ನು ಮಿತ್ರಮಂಡಳಿ ವತಿಯಿಂದ ಸಮ್ಮಾನಿಸಲಾಯಿತು. ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶಿಬಿರಾಥರ್ಿಗಳ ಪರವಾಗಿ ಕಿರಣ್ ಮತ್ತು ಶಿಶಿರ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಮಿತ್ರ ಮಂಡಳಿಯ ಮಾಜಿ ಅಧ್ಯಕ್ಷ ಹರಿಶ್ಚಂದ್ರ ಶೆಟ್ಟಿಗಾರ್ ಅವರು ಸ್ವಾಗತಿಸಿದರು. ರಾಜೇಶ್ ಪುಳಿಮಜಲು ಶಿಬಿರಾಥರ್ಿಗಳ ಪಟ್ಟಿ ವಾಚಿಸಿದರು. ಕಾರ್ಯದಶರ್ಿ ರವೀಂದ್ರ ಶೆಟ್ಟಿ ಅನಿಲಡೆ ವಂದಿಸಿದರು. ಶಿಕ್ಷಕ ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಿಬಿರಾಥರ್ಿಗಳು ತಾವೇ ರಚಿಸಿದ ನೇತ್ರಾವತಿ ನದಿ ತಿರುವಿನ ಕುರಿತ ಕಿರು ನಾಟಕ ಎಂಕ್ಲೆನಪ್ಪೆ ನೇತ್ರಾವತಿಯನ್ನು ಪ್ರದಶರ್ಿಸಿದರು.

By suddi9

Leave a Reply

Your email address will not be published. Required fields are marked *