ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ೧೮೬ ನೇ ಜನ್ಮ ದಿನವನ್ನು ಮಾ.೧೫ ರಂದು ಸೋಮವಾರ ಆಶ್ರಮದಲ್ಲಿ ಆಚರಿಸಲಾಯಿತು.ಉಷಾ ಆರತಿಯ ನಂತರ ವಿಷ್ಣು ಸಹಸ್ರನಾಮ ಪಠಣ ಮತ್ತು , ಹೋಮ , ವಿಶೇಷ ಭಜನಾ ಸಂಕೀರ್ತನೆಯೊದಿಗೆ ಶ್ರೀ ರಾಮಕೃಷ್ಣರವರಿಗೆ ವಿಶೇಷ ಪೂಜೆ ನಡೆಯಿತು. ಮಂಗಳಾರತಿಯ ನಂತರ ಅನ್ನಪ್ರಸಾದ ವಿತರಿಸಲಾಯಿತು.
ಸುಮಾರು ೫೦೦ ಭಕ್ತರು ಭಾಗವಹಿಸಿದ್ದರು.ಮಧ್ಯಾಹ್ನ ೨ ರಿಂದ ರಾತ್ರಿ ೮ ರವರೆಗೆ ೬ ವಿವಿಧ ಭಜನಾ ಮಂಡಳಿಯವರಿಂದ ವಿಶೇಷ ಭಜನೆ ನಡೆಯಿತು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಇದ್ದರು.


