ಪೊಳಲಿ: ಕೃಷಿ ಇಲಾಖೆ ಮತ್ತು ಬಂಟ್ವಾಳ ಕೃಷಿಕ ಸಮಾಜದ ವತಿಯಿಂದ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆ ಕಾರ್ಯಾಗಾರಕ್ಕೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಗದ್ದೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜು.೧೩ರಂದು ಮಂಗಳವಾರ ಚಾಲನೆ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲು ಸ್ವತಹ ಟ್ರಾಕ್ಟರ್‌ನಲ್ಲಿ ಚಲಾಯಿಸಿ ಶುಭ ಹಾರೈಸಿದರು.
ದೇವಸ್ಥಾನದ ಎದುರು ಭಾಗದಲ್ಲಿರುವ ೨ ಎಕರೆ ವಿಸ್ತೀರ್ಣದ ಗದ್ದೆ ಅಲ್ಲದೇ ಹಡೀಲು ಬಿದ್ದ ಗದ್ದೆಯಲ್ಲಿ ಯಲ್ಲಿ ನೇಜಿ ನಾಟಿ ಮಾಡಲು ಪ್ರಾರಂಬಿಸಲಾಗಿದೆ ಎಂದು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ತಿಳಿಸಿದರು. ಇದೇ ವೇಳೆ ಕೃಷಿ ಸಂಜೀವಿನಿ, ರೋಟರಿ ಟಿಲ್ಲರ್ ಪ್ರದರ್ಶನ ನಡೆಯಿತು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ತಹಶೀಲ್ದಾರ್ ರಶ್ಮಿ ಎಸ್.ಆರ್., ಸಹಾಯಕ ಕೃಷಿ ನಿರ್ದೇಶಕ ಚೆನ್ನ ಕೇಶವಮೂರ್ತಿ, ತಾಂತ್ರಿಕ ಕೃಷಿ ಅಧಿಕಾರಿ ನಂದನ್ ಶೆಣೈ, ಸಹಾಯಕ ಅಧಿಕಾರಿ ಕೊರಗಪ್ಪ, ಹನುಮಂತ ಕಲ್ಗಿ, ಕೃಷಿಕ ಸಮಾಜ ಅಧ್ಯಕ್ಷ ಎಂ.ಪದ್ಮರಾಜ್ ಬಲ್ಲಾಳ್ ಮಾವಂತೂರು, ರಾಜ್ಯ ಪ್ರತಿನಿಧಿ ಕೆ.ಪದ್ಮನಾಭ ರೈ, ಸದಸ್ಯರಾದ ಗಣೇಶ್ ಶೆಟ್ಟಿ, ಎಸ್.ಹೊಳ್ಳ, ಪೊಳಲಿ ಸಿಎ ಬ್ಯಾಂಕ್ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ವೆಂಕಟೇಶ್ ನಾವಡ, ನಿರ್ದೇಶಕ ಯಶವಂತ ಪೂಜಾರಿ, ಸಿಎ ಬ್ಯಾಂಕ್ ವಿಜಯ ರವಿ ಫೆರ್ನಾಂಡಿಸ್, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ , ಅಮ್ಮುಂಜೆ ಗ್ರಾಂ ಪಂ.ಸದಸ್ಯ ವಾಮನ ಆಚಾರ್ಯ, ಸುಕೇಶ್ ಚೌಟ,ರಮಾನಾಥ ರಾಯಿ, ಕಿಶೋರ್ ಪಲ್ಲಿಪಾಡಿ ,ಪೊಳಲಿ ರಾಧಕೃಷ್ಣ ತಂತ್ರಿ, ಲೋಕೇಶ್ ಭರಣಿ, ಚಂದ್ರವತಿ, ಕಾರ್ತಿಕ್ ಬಲ್ಲಾಲ್, ಪಿಡಿಒ ನಯನ ಮತ್ತಿತರರು ಇದ್ದರು.