ಕೈಕಂಬ: ಸನಾತನ ಭಾರತೀಯ ಸಂಸ್ಕೃತಿ ಇನ್ನೂ ಜೀವಂತವಾಗಿರುವುದು ಯಕ್ಷಗಾನದಂತಹ ಕಲೆಗಳಿಂದ ಮಾತ್ರ. ರಾಮಾಯಣ ಭಗವದ್ಗೀತೆಗಳಂತಹ ಮಹಾಕಾವ್ಯಗಳು ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯುವಂತೆ ಮಾಡುವಲ್ಲಿ ಯಕ್ಷಗಾನದ ಪಾತ್ರ ಹಿರಿದು ಎಂಬುದಾಗಿ ಅಕ್ಷಯಪಾತ್ರೆ ಮಂಗಳೂರು ಇದರ ಕಾರ್ಯದರ್ಶಿ ಗಳಾದಂತ ಶ್ರೀ ಸನಂದನ ದಾಸ ಸ್ವಾಮೀಜಿ ಅವರು ಹೇಳಿದರು.b44bc8e7-34ae-4bff-81e6-9821a7c4922d

ಸುಂಕದಕಟ್ಟೆ ಮೇಳದ ಕಲಾವಿದರಿಗೆ ಅಕ್ಷಯ ಪಾತ್ರೆ ಫೌಂಡೇಶನ್ ಮಂಗಳೂರು ಇದರ ವತಿಯಿಂದ ಜು.16 ರಂದು ಶುಕ್ರವಾರ ಸುಂಕದಕಟ್ಟೆ  ಕ್ಷೇತ್ರದಲ್ಲಿ  ಯಕ್ಷಗಾನ ಕಲಾವಿದರಿಗೆ ಆಹಾರದ ಕಿಟ್ ವಿತರಿಸಿ ಮಾತನಾಡಿ  ಭಗವಂತನ ನಾಮಸ್ಮರಣೆಯಿಂದ ಜಗತ್ತಿಗೆ ಅಂಟಿದ ಮಹಾಮಾರಿ ದೂರವಾಗಲಿ, ಯಕ್ಷಗಾನದ ಕಲಾವಿದರುಗಳ ಮೊಗದಲ್ಲಿ ನೆಮ್ಮದಿಯ ನಗು ಕಾಣುವಂತಾಗಲಿ ಎಂದು ಶುಭ ಹಾರೈಸಿದರು.14612524-9041-4531-ab43-bf6a69c5db95

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯಕ್ಷಗಾನ ಕಲಾ ಪೋಷಕ  ಮೋನಪ್ಪ ಪೂಜಾರಿ  ಮಾತನಾಡಿ, ಆಲಸ್ಯವಿಲ್ಲದೆ ಆಡಂಬರವಿಲ್ಲದೆ ಪರಿಶ್ರಮದಿಂದ ಜೀವನ ಮೌಲ್ಯಗಳನ್ನು , ನಮ್ಮ ಆಚಾರ ವಿಚಾರಗಳು ಸಂಸ್ಕೃತಿಯನ್ನು ಜನಮಾನಸಕ್ಕೆ ತಲುಪಿಸುವಂತೆ ಮಾಡುವ ಕಲೆಗಳ ಪೈಕಿ ಯಕ್ಷಗಾನವು ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಇಂದು ಮುಂದು ಎಂದೆಂದೂ ಅಚ್ಚಳಿಯದ ಕಲೆ ಅಮರವಾದ ಕಲೆ ಯಕ್ಷಗಾನ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ  ಇತ್ತೀಚೆಗಷ್ಟೇ ಅಗಲಿದ ತೆಂಕುತಿಟ್ಟಿನ ಮೇರು ಕಲಾವಿದ ಸಂಪಾಜೆ ಶೀನಪ್ಪ ರೈ ಹಾಗು ಸುಂಕದಕಟ್ಟೆ ಮೇಳದ ಶ್ರೀ ಮಹಾಬಲ ಶೆಟ್ಟಿ ಮಂಗಲ್ಪಾಡಿ , ನೇಪಥ್ಯ ಕಲಾವಿದ ಕಾಂತಪ್ಪಪೂಜಾರಿ ಆರ್ ಕೆ ಇವರುಗಳಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.8cde6512-1882-4b61-b7db-3254ee4e2f3d

ಇದೇ ಸಂದರ್ಭದಲ್ಲಿ ಕಾಂತಪ್ಪ ಪೂಜಾರಿಯವರ ಕುಟುಂಬಕ್ಕೆ ಧನಸಹಾಯ ಹಾಗೂ ಮೇಳದ ಹಿಮ್ಮೇಳ ಮುಮ್ಮೇಳ ಕಲಾವಿದರು ಸೇರಿದಂತೆ ಒಟ್ಟು ಅರುವತ್ತು ಮಂದಿ ಕಲಾವಿದರಿಗೆ ಆಹಾರದ ಕಿಟ್ ಅನ್ನು ವಿತರಿಸಲಾಯಿತು.

ಸುಂಕದಕಟ್ಟೆ ಕ್ಷೇತ್ರದ ಆಡಳಿತ ಮೊಕ್ತೇಸರರಾದ  ನಾರಾಯಣ ಪೂಜಾರಿಯವರು ಅಧ್ಯಕ್ಷತೆಯನ್ನು ವಹಿಸಿದ್ದ ಈ ಕಾರ್ಯಕ್ರಮದಲ್ಲಿ   ಜ್ಯೋತಿ ನಾರಾಯಣ ಪೂಜಾರಿ, ಯಕ್ಷಗಾನ ಗುರುಗಳಾದ  ಹರಿನಾರಾಯಣ ಬೈಪಡಿತ್ತಾಯ, ಮೇಳದ ಪ್ರಧಾನ ಭಾಗವತರಾದ  ಯೋಗೀಶ ಶರ್ಮ, ಪ್ರಧಾನ ಹಾಸ್ಯಗಾರರಾದ  ಮಿಜಾರು ತಿಮ್ಮಪ್ಪ ಇವರು ಉಪಸ್ಥಿತರಿದ್ದರು.

ಮೇಳದ ಪ್ರಬಂಧಕರಾದ ಶ್ರೀ ರಮೇಶ್ ಕುಲಶೇಖರ ಇವರು ಸ್ವಾಗತಿಸಿ ವಂದಿಸಿದರು.  ಶ್ರೀಧರ ಕುಂದರ್  ನಿರೂಪಿಸಿದರು.

 

By suddi9

Leave a Reply

Your email address will not be published. Required fields are marked *