ಕೈಕಂಬ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಪದವು ಸಮೀಪದ ಅಲೆಕ್ಕಿ ಎಂಬಲ್ಲಿ ಕಾಲು ಜಾರಿ ಬಾವಿಗೆ ಬಿದ್ದು  ಅವಿವಾಹಿತನೋರ್ವ  ದಾರೂಣವಾಗಿ ಮೃತಪಟ್ಟ ಘಟನೆ  ಭಾನುವಾರ ನಡೆದಿದೆ. ಮೃತಪಟ್ಟ  ವ್ಯಕ್ತಿ  ಎಡಪದವು ಗ್ರಾಮದ ಕೊರ್ಡೆಲ್ ನಿವಾಸಿ  ಯೋಗೀಶ್ ನಾಯಕ್ (49) ಎಂದು ತಿಳಿದುಬಂದಿದೆ. 00

ಘಟನೆಯ ವಿವರ:

ಕುಪ್ಪೆಪದವು ಸಮೀಪದ ಅಲೆಕ್ಕಿ ಎಂಬಲ್ಲಿರುವ ಚಂದ್ರಹಾಸ್ ಎಂಬವರ  ಮನೆಯ ಬಾವಿಯ ಪಕ್ಕದಲ್ಲಿ  ದೀವಿ ಹಲಸು ಕೊಯ್ಯಲು ಮರ ಹತ್ತುವ ವೇಳೆ ಅಕಸ್ಮಾತ್ ಆಯತಪ್ಪಿ ಬಾವಿಗೆ ಬಿದ್ದಿದ್ದರು ಎನ್ನಲಾಗಿದೆ. ಚಂದ್ರಹಾಸ ಅವರು ಎಡಪದವಿನಲ್ಲಿ ವಾಸಿಸುತ್ತಿದ್ದು  ಅಲೆಕ್ಕಿಯ ಮನೆಯಲ್ಲಿ ಯಾರೂ ವಾಸಿಸುತ್ತಿಲ್ಲ.    ಚಂದ್ರಹಾಸ್ ಅವರು ಅಲೆಕ್ಕಿಯ ಮನೆಗೆ ಬಂದಾಗ ಯೋಗೀಶ್ ಅವರು ಬಾವಿಗೆ ಬಿದ್ದಿರುವುದು ಗಮನಕ್ಕೆ ಬಂದಿತ್ತು ತಕ್ಷಣ ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.

ರಾತ್ರಿ ವೇಳೆ ಸ್ಥಳೀಯರ ನೆರವಿನಿಂದ  ಅಗ್ನಿಶಾಮಕ ದಳ ಮತ್ತು ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಲಾಯಿತು. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *