ಮುಂಬಯಿ: ಮಹಾನಗರದಲ್ಲಿನ ಮಾಟುಂಗಾ ಪೂರ್ವದಲ್ಲಿ ಕೇಂದ್ರ ಕಛೇರಿ ಹೊಂದಿರುವ ಮುಂಬಯಿ ಕನ್ನಡ ಸಂಘವು ಕಳೆದ ವರ್ಷಗಳಿಂದ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಸಂಘಕ್ಕೆ ತನ್ನದೇ ಆದಂತಹ ಸಭಾಗೃಹ ವಿಲ್ಲದಿದ್ದರೂ ಈ ಎಲ್ಲಾ ಕಾರ್ಯಕ್ರಮಗಳನ್ನು ಸದಾ ಹಮ್ಮಿಕೊಂಡು ನಡೆಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ಸಂಘವು ಉಚಿತ ವಾಚನಾಲಯ ಮತ್ತು ೧೪ ಸಾವಿರಕ್ಕೂ ಹೆಚ್ಚು ಪುಸ್ತಕಗಳಿರುವ ಉತ್ತಮ ಗ್ರಂಥಾಲಯವನ್ನು ನಡೆಸುತ್ತಿದೆ. ಮುಂಬಯಿ ಕನ್ನಡ ಸಂಘದ ಕಚೇರಿ ಮತ್ತು ವಾಚನಾಲಯ ಗ್ರಂಥಾಲಯವು ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿರುವ ವೆಂಕಟೇಶ ನಿವಾಸದ ಕಟ್ಟಡದಲ್ಲಿದೆ.Kannada Sangha Mumbai 1ಇದು ೯೫ವರ್ಷದ ಹಳೆಯ ಕಟ್ಟಡವಾಗಿದ್ದು, ೨೦೨೧ಡಿಸೆಂಬರ್ ತಿಂಗಳಿನಂದು ಕಟ್ಟಡ ಕೆಡವಿ ನವೀಕರಣ ಮಾಡಲು ನಿರ್ಧರಿಸಲಾಗಿದೆ. ಈ ಕಟ್ಟಡದಲ್ಲಿ ಸಂಘಕ್ಕೆ ೧೦೮೦ ಚದರ ಅಡಿಯ ಒಂದು ಕಿರು ಸಭಾಗೃಹ ಖರೀದಿಸಲು ನಿರ್ಧರಿಸಲಾಗಿದೆ. ಇದಕ್ಕೆ ಸುಮಾರು ೨ ಕೋಟಿಗೂ ಅಧಿಕ ಖರ್ಚು ತಾಗಲಿದೆ. ೩ ವರ್ಷಗಳ ಅವಧಿಯಲ್ಲಿ ಈ ಸಭಾಗೃಹ ತಯಾರಾಗಲಿದೆ. ಆದುದರಿಂದ ಈ ಸಭಾಗೃಹ ಖರೀದಿಸಲು ನಿಧಿ ಸಂಗ್ರಹಣೆ ಮಾಡಬೇಕೆಂದು ನಿರ್ಧರಿಸಲಾಗಿದೆ.

ಈ ಸಲುವಾಗಿ ಒಂದು ನಿಧಿ ಸಂಗ್ರಹಣಾ ಸಮಿತಿ ರಚಿಸಿ ಧನ ಸಂಗ್ರಹ ಮಾಡಬೇಕಾಗಿದೆ. ಆದುದರಿಂದ ಆ.೨೮ ರಂದು  ಶನಿವಾರ ಸಂಜೆ ೫.೦೦ ಗಂಟೆಗೆ ಸಂಘದ ವಾಚನಾಲಯದಲ್ಲಿ ನಡೆಯಲಿರುವ ಈ ಸಭೆಗೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಉಪಸಮಿತಿಯ ಸದಸ್ಯರು ಅಲ್ಲದೇ ನಿಧಿ ಸಂಗ್ರಹಕ್ಕೆ ಸಹಾಯ ಮಾಡಲಿಚ್ಛಿಸುವ ಸಹೃದಯಿ ದಾನಿಗಳು ಈ ಸಭೆಗೆ ಹಾಜರಿರಬೇಕಾಗಿ ಸಂಘದ ಅಧ್ಯಕ್ಷ ಗುರುರಾಜ ಎಸ್.ನಾಯಕ್ ಮತ್ತು ಕಿರು ಸಭಾಗೃಹ ಸಮಿತಿ ಮುಖ್ಯಸ್ಥ ಕಮಲಾಕ್ಷ ಜಿ.ಸರಾಫ್ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಡಾ| ರಜನಿ ವಿ.ಪೈ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.

By suddi9

Leave a Reply

Your email address will not be published. Required fields are marked *