ಕುಪ್ಪೆಪದವು: ಯುವವಾಹಿನಿ (ರಿ) ಇದರ ಕುಪ್ಪೆಪದವು ಘಟಕದ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಾಗಂದಡಿ ಸಭಾ ವೇದಿಕೆಯಲ್ಲಿ ಆದಿತ್ಯವಾರ ನಡೆಯಿತು. ಕಾರ್ಯಕ್ರಮವನ್ನು ನಾರಾಯಣ ಗುರುಗಳಿಗೆ ದೀಪ ಬೆಳಗಿಸುವ ಮೂಲಕ ದುರ್ಗೆಶ್ವರಿ ದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಉಮೇಶ್ ಅಮೀನ್ ನಾಗಂದಡಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ನಿರ್ಗಮನಾಧ್ಯಕ್ಷ ಸತೀಶ್ ಕೆ. ಎಂ. ವಹಿಸಿದ್ದರು.ಅಜಯ್ ಅಮೀನ್ ನಾಗಂದಡಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು, ಪದಾಧಿಕಾರಿಗಳಿಗೆ ಕೇಂದ್ರ ಸಮಿತಿಯ ಅಧ್ಯಕ್ಷ ಡಾ| ರಾಜಾರಾಮ್ ಕೆ.ಬಿ. ಯವರು ಪ್ರತಿಜ್ಞಾ ವಿಧಿಯನ್ನು ಬೋದಿಸಿ ಶುಭ ಹಾರೈಸಿದರು. ಇದೇ ವೇಳೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 85 % ಕಿಂತ ಅಧಿಕ ಅಂಕ ಪಡೆದ ಯುವವಾಹಿನಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ, ಸದಸ್ಯರಿಗೆ “ಆರೋಗ್ಯ ನಿಧಿ” ಯೋಜನೆಗೆ ಚಾಲನೆ ನೀಡಲಾಯಿತು.
ಮುತ್ತೂರು ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ಉಪಾಧ್ಯಕ್ಷೆ ಮಾಲತಿ ಗಿರೀಶ್, ಘಟಕದ ಸ್ಥಾಪಕಾಧ್ಯಕ್ಷ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಅಂಬೆಲೊಟ್ಟು, ಕೇಂದ್ರ ಸಮಿತಿಯ ಕಾರ್ಯದರ್ಶಿಅಶೋಕ್ ಕುಮಾರ್ ಪಡ್ಪು, ಕೇಂದ್ರ ಸಮಿತಿಯ ಯುವಸಿಂಚನದ ಸಂಪಾದಕ ದೇವರಾಜ್ ಅಮೀನ್, ಘಟಕದ ನೂತನ ಅದ್ಯಕ್ಷ ಜಗದೀಶ್ ದುರ್ಗಕೊಡಿ, ಉಪಾಧ್ಯಕ್ಷೆ ಗೀತಾ ಚಂದ್ರಮಜಲು, ಕಾರ್ಯದರ್ಶಿ ರಕ್ಷಿತ್ ಅಟ್ಟೆಪದವು, ಜೊತೆ ಕಾರ್ಯದರ್ಶಿ ನವೀನ್ ಚಂದ್ರ ಪಂಜ ಬರೆ, ಕೋಶಾಧಿಕಾರಿ ಅಶ್ವಿನಿ ಅಟ್ಟೆಪದವು, ಸಂಘಟನಾ ಕಾರ್ಯದರ್ಶಿ ಅಕ್ಷಿತ್ ಕುಮಾರ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ನಿರ್ಗಮನಾಧ್ಯಕ್ಷ ಸತೀಶ್ ಕೆ. ಎಂ. ವಹಿಸಿದ್ದರು.ಅಜಯ್ ಅಮೀನ್ ನಾಗಂದಡಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು, ಪದಾಧಿಕಾರಿಗಳಿಗೆ ಕೇಂದ್ರ ಸಮಿತಿಯ ಅಧ್ಯಕ್ಷ ಡಾ| ರಾಜಾರಾಮ್ ಕೆ.ಬಿ. ಯವರು ಪ್ರತಿಜ್ಞಾ ವಿಧಿಯನ್ನು ಬೋದಿಸಿ ಶುಭ ಹಾರೈಸಿದರು. ಇದೇ ವೇಳೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 85 % ಕಿಂತ ಅಧಿಕ ಅಂಕ ಪಡೆದ ಯುವವಾಹಿನಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣೆ, ಸದಸ್ಯರಿಗೆ “ಆರೋಗ್ಯ ನಿಧಿ” ಯೋಜನೆಗೆ ಚಾಲನೆ ನೀಡಲಾಯಿತು.
ಮುತ್ತೂರು ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ಉಪಾಧ್ಯಕ್ಷೆ ಮಾಲತಿ ಗಿರೀಶ್, ಘಟಕದ ಸ್ಥಾಪಕಾಧ್ಯಕ್ಷ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಅಂಬೆಲೊಟ್ಟು, ಕೇಂದ್ರ ಸಮಿತಿಯ ಕಾರ್ಯದರ್ಶಿಅಶೋಕ್ ಕುಮಾರ್ ಪಡ್ಪು, ಕೇಂದ್ರ ಸಮಿತಿಯ ಯುವಸಿಂಚನದ ಸಂಪಾದಕ ದೇವರಾಜ್ ಅಮೀನ್, ಘಟಕದ ನೂತನ ಅದ್ಯಕ್ಷ ಜಗದೀಶ್ ದುರ್ಗಕೊಡಿ, ಉಪಾಧ್ಯಕ್ಷೆ ಗೀತಾ ಚಂದ್ರಮಜಲು, ಕಾರ್ಯದರ್ಶಿ ರಕ್ಷಿತ್ ಅಟ್ಟೆಪದವು, ಜೊತೆ ಕಾರ್ಯದರ್ಶಿ ನವೀನ್ ಚಂದ್ರ ಪಂಜ ಬರೆ, ಕೋಶಾಧಿಕಾರಿ ಅಶ್ವಿನಿ ಅಟ್ಟೆಪದವು, ಸಂಘಟನಾ ಕಾರ್ಯದರ್ಶಿ ಅಕ್ಷಿತ್ ಕುಮಾರ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.ನಿಕಟಪೂರ್ವ ಅಧ್ಯಕ್ಷರುಗಳಾದ ಅಜಯ್ ಅಮೀನ್ ಮತ್ತು ಸತೀಶ್ ಕೆ. ಎಂ. ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಗೀತ ಟೀಚರ್ ಚಂದ್ರಮಾಜಲು ಕಾರ್ಯಕ್ರಮ ನಿರೂಪಿಸಿದರು, ನಿರ್ಗಮನ ಕಾರ್ಯದರ್ಶಿ ಅಕ್ಷಿತ್ ವರದಿ ಮಂಡಿಸಿದರು, ನೂತನ ಕಾರ್ಯದರ್ಶಿ ರಕ್ಷಿತ್ ಅಟ್ಟೆಪದವು ವಂದಿಸಿದರು.