ಕೈಕಂಬ : ರಾಷ್ಟ್ರಪಿತ ಗಾಂಧೀಜಿಯವರ ೧೫೩ನೇ ಜನ್ಮದಿನವಾದ ಅ. ೨ರಂದು ಗುರುಪುರ ಗ್ರಾಮ ಪಂಚಾಯತ್ನಲ್ಲಿ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸ್ಥಳೀಯ ಸರ್ಕಾರಿ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆ ಏರ್ಪಡಿಸಲಾಯಿತು.
ಪಂಚಾಯತ್ ವ್ಯಾಪ್ತಿಯ ತಾರಿಕರಿಯ ದ.ಕ.ಜಿ.ಪಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಡ್ಡೂರಿನ ದ.ಕ.ಜಿ.ಪಂ ಸರ್ಕಾರಿ ಪ್ರಾಥಮಿಕ ಶಾಲೆ, ಗುರುಪುರ ಸರ್ಕಾರಿ ಪ್ರೌಢಶಾಲೆ ಮತ್ತು ರೋಸಾ ಮಿಸ್ತಿಕ ಅನುದಾನಿಕ ಪ್ರೌಢಶಾಲೆ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು.
ನಿವೃತ್ತ ಶಿಕ್ಷಕ ರಾಮಚಂದ್ರ ಶಬರಾಯ ಮಾತನಾಡಿ, ಎಲ್ಲ ಸಾಂಕ್ರಾಮಿಕ ರೋಗಗಳ ಮೂಲ ಅಸ್ವಚ್ಛತೆ. ಪ್ರತಿ ಮನೆಯಲ್ಲೂ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಬೇಕು ಎಂದರು.
ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ದಿಲ್ಶಾದ್ ಎ, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ಅಬೂಬಕ್ಕರ್ ಸ್ವಾಗತಿಸಿ ಪ್ರಸ್ತಾವಿಸಿದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.
`ಸೋಕ್ಪಿಟ್’ ಅಭಿಯಾನ :
ಗುರುಪುರ ಗ್ರಾಮ ಪಂಚಾಯತ್ನಲ್ಲಿ ಗಾಂಧಿ ಜಯಂತಿಯಂದೇ ಗ್ರಾಮದ ಪ್ರತಿ ಮನೆಮನೆಯಲ್ಲಿ ಹಸಿ/ಒಣ ತ್ಯಾಜ್ಯ ಸಂಗ್ರಹ ಹಾಗೂ ಇಂಗುಗುಂಡಿ(ಸೋಕ್ಪಿಟ್) ಅಭಿಯಾನಕ್ಕೆ ಅಧ್ಯಕ್ಷ ಯಶವಂತ ಶೆಟ್ಟಿ ಸಾಂಕೇತಿಕ ಚಾಲನೆ ನೀಡಿ, ಅಡ್ಡೂರು ಗ್ರಾಮದ ನೂಯಿಯ ಚಂದ್ರ ಐತಾಳ ಮತ್ತು ಸೂರ್ಯ ಐತಾಳರಿಗೆ ಮನೆ ಕಸ ಪ್ರತ್ಯೇಕಿಸಲು ಪ್ಲಾಸ್ಟಿಕ್ ಡಬ್ಬ ಹಾಗೂ ಗೋಣಿ ಚೀಲ ವಿತರಿಸಿದರು.