ಕೈಕಂಬ : ಮೂಡುಶೆಡ್ಡೆ ಮತ್ತು ವಾಮಂಜೂರು ಪರಿಸರದಲ್ಲಿ ಚಿರಪರಿಚಿತರಾಗಿದ್ದ ಪ್ರಾಮಾಣಿಕ ರಿಕ್ಷಾ ಚಾಲಕ ರತನ್ ಪೂಜಾರಿ ಅವರೀಗ ಅಂಗಾಂಗ ವೈಫಲ್ಯದಿಂದ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಹಾಸಿಗೆ ಹಿಡಿದಿದ್ದು, ದುಬಾರಿ ಚಿಕಿತ್ಸೆ ಹಿನ್ನೆಲೆಯಲ್ಲಿ ದಾನಿಗಳ ನೆರವು ಯಾಚಿಸಿದ್ದಾರೆ.

ಮೂಡುಶೆಡ್ಡೆ ಶಿವಶಕ್ತಿ ಭಜನಾ ಮಂದಿರದ ಹತ್ತಿರ ಬಾಡಿಗೆ ಮನೆಯಲ್ಲಿ ಪತ್ನಿ, ಶಾಲೆಗೆ ಹೋಗುತ್ತಿರುವ ಇಬ್ಬರು ಪುಟ್ಟ ಹೆಣ್ಣು ಮಕ್ಕಳು ಹಾಗೂ ತಂದೆಯೊAದಿಗೆ ಜೀವನ ಸಾಗಿಸುತ್ತಿದ್ದ ರತನ್ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಕಿಡ್ನಿ, ಲಿವರ್ ವೈಫಲ್ಯಗೊಂಡಿರುವ ರತನ್ ಕೆಲವು ದಿನಗಳಿಂದ ಕದ್ರಿಯ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪ್ರತಿದಿನದ ಔಷಧಿ ಖರ್ಚಿಗೆ ೫ರಿಂದ ೧೦,೦೦೦ ರೂ ತಗುಲುತ್ತದೆ. ಚಿಕಿತ್ಸೆ ಮುಂದುವರಿಸಬೇಕಾದ ಅನಿವಾರ್ಯತೆ ಇರುವುದರಿಂದ ಆಸ್ಪತ್ರೆ ವೆಚ್ಚ ೧೦ ಲಕ್ಷ ರೂ ಆಗಬಹುದೆಂದು ವೈದ್ಯರು ತಿಳಿಸಿದ್ದಾರೆ. ಈ ಕುಟುಂಬಕ್ಕೆ ಸಮಾಜವೇ ಧೈರ್ಯ ತುಂಬಿ, ಆರ್ಥಿಕ ನೆರವಿನ ಆಶಾಕಿರಣವಾಗಬೇಕಿದೆ.
ಸಹಾಯ ಮಾಡುವವರು ಗೂಗಲ್ಪೇ ನಂಬ್ರ : ೯೫೯೧೬೯೦೬೧೨. ಬ್ಯಾಂಕ್ ಖಾತೆ ವಿವರ : ರತನ್ ಪೂಜಾರಿ, ಖಾತೆ ನಂಬ್ರ : ೬೪೯೨೫೦೦೧೦೦೨೦೪೪೦೧, ಐಎಫ್ಸಿ ಕೋಡ್ : ಕೆಎಆರ್ಬಿ೦೦೦೦೬೪೯, ಕರ್ನಾಟಕ ಮೂಡುಶೆಡ್ಡೆ ಈ ಖಾತೆ ಸಂಪರ್ಕಿಸಬಹುದು.