ಕೈಕಂಬ: ಅಡ್ಡೂರು ಪೊಣ್ಣಂಗಿಳ ಶ್ರೀ ಮುಖ್ಯಪ್ರಾಣ ದೇವರ ಗರ್ಭಗುಡಿಯ ಜೀರ್ಣೋದ್ಧಾರದ ಪಾದುಕಾನ್ಯಾಸವು ಸೆ.1ರಂದು ಗುರುವಾರ ಕೋಡಿಮಜಲ್ ಶ್ರೀ ಅನಂತಪದ್ಮನಾಭ ಉಪಾಧ್ಯಾಯರ ನೇತ್ರತ್ವದಲ್ಲಿ ನಡೆಯಿತು.



ಈ ಸಂದರ್ಭದಲ್ಲಿ ಮುಖ್ಯಪ್ರಾಣ ದೇವಸ್ಥಾನದ ಅರ್ಚಕ ನಡುಮನೆ ಚಂದ್ರಶೇಖರ ಭಟ್ ,ಗೌರವಾಧ್ಯಕ್ಷ ನೂಯಿ ಬಾಲಕೃಷ್ಣ ರಾವ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧನಂಜಯ ಭಟ್ ಗಂದಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರವಿಶಂಕರ್ ರಾವ್ ನೂಯಿ ,ಚಂದ್ರಹಾಸ ನಲ್ಲಿ ಪಾಡಿ, ಸುಭಾಶ್ಚಂದ್ರ , ವಿಶ್ವೇಶ್ವರ ಭಟ್, ಮತ್ತು ಊರ-ಪರವೂರ ಭಕ್ತರು ಉಪಸ್ಥಿತರಿದ್ದರು





