ಕೈಕಂಬ: ನೂತನವಾಗಿ ರಚನೆಗೊಂಡರುವ ಪಡುಪೆರಾರ ಗಂಜಿಮಠ ಬಿಲ್ಲವ ಸಮಾಜ ಸೇವಾ ಸಂಘದ(ರಿ) ವತಿಯಿಂದ ಸೆ. ೧೧ರಂದು ಬೆಳಿಗ್ಗೆ ೯ ಗಂಟೆಗೆ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಕ್ಷೇತ್ರದ ನಿರಂಜನ ಸ್ವಾಮಿ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ೧೬೮ನೇ ಜಯಂತಿ ಉತ್ಸವ ನಡೆಯಲಿದೆ.

ಬೆಳಿಗ್ಗೆ ೯ರಿಂದ ೧೦ರವರೆಗೆ ವಕೀಲ ವಿನೋದರ ಪೂಜಾರಿ ನೇತೃತ್ವದಲ್ಲಿ ಭಜನೆ ನಡೆಯಲಿದೆ. ೧೦ ಗಂಟೆಗೆ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮತ್ತು ಗುರುಗಳ ಸಂದೇಶದ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಲಿದೆ.

ಪೆರಾರ ಗಂಜಿಮಠ ನೂತನ ಬಿಲ್ಲವ ಸಮಾಜ ಸೇವಾ ಸಂಘದ ಪದಾಧಿಕಾರಿಗಳು : ಅಧ್ಯಕ್ಷರಾಗಿ ಗಣೇಶ್ ಪೂಜಾರಿ ಅಳಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಜಿ. ಸುನಿಲ್ ಗಂಜಿಮಠ, ಗೌರವಾಧ್ಯಕ್ಷರಾಗಿ ಕೃಷ್ಣ ಅಮೀನ್, ಮೋನಪ್ಪ ಪೂಜಾರಿ, ಕಿಶೋರ್ ಪೂಜಾರಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪದ್ಮನಾಭ ಪೂಜಾರಿ ನೀರಳಿಕೆ, ವೆಂಕಪ್ಪ ಪೂಜಾರಿ ಪಡುಪೆರಾರ ಮತ್ತು ನಾಗೇಶ್ ಕೋಟ್ಯಾನ್ ಮಳಲಿ ಆಯ್ಕೆಯಾಗಿದ್ದಾರೆ.

ಈಶ್ವರ ಪೂಜಾರಿ(ಕೋಶಾಧಿಕಾರಿ), ಜೊತೆ ಕಾರ್ಯದರ್ಶಿಗಳಾಗಿ ರಾಜೇಶ್ ಪೂಜಾರಿ ಮಜಲ್‌ಹೌಸ್, ಪ್ರಶಾಂತ್ ಅಳಿಕೆ, ಗೋಪಾಲ ಪೂಜಾರಿ ಅಳಿಕೆ, ಕಾರ್ಯದರ್ಶಿಗಳಾಗಿ ಕಿರಣ್ ಸಾಲ್ಯಾನ್ ಕಾಯರಣೆ ಮತ್ತು ಲಕ್ಷ್ಮೀಶ ಪೂಜಾರಿ ಮುಂಡಬೆಟ್ಟು, ಸಲಹೆಗಾರರಾಗಿ ಸದಾಶಿವ ಪೂಜಾರಿ ಮಜಲ್‌ಹೌಸ್, ಲಕ್ಷ್ಮೀಶ ಅಳಿಕೆ ಅಶೋಕ್ ನೀರಳಿಕೆ, ಶಶಿಕುಮಾರ್ ಈಶ್ವರಕಟ್ಟೆ ಹಾಗೂ ಕಾರ್ಯಕಾರಿ ಸಮಿತಿಗೆ ಕೃಷ್ಣ ಪೂಜಾರಿ ಬೊಲ್ಲಿಗುಡ್ಡೆ, ನವೀನ್ ಪೂಜಾರಿ ಅಳಿಕೆ, ಸುಧಾಕರ ಅಳಿಕೆ, ಮೋಹನ್ ಪೂಜಾರಿ ಕಾಯರಣೆ, ಹರ್ಷ ಕುಮಾರ್, ಜಗದೀಶ ಪೂಜಾರಿ ಕಾಯರಣೆ, ಕ್ರೀಡಾ ಕಾರ್ಯದರ್ಶಿಯಾಗಿ ಅಂಚನ್ ಅಳಿಕೆ, ಹರೀಶ್ ಪೂಜಾರಿ ಗಾಂಧಿನಗರ ಆಯ್ಕೆಯಾಗಿದ್ದಾರೆ.

ನೂತರ ಸಂಘದ ನವಂಬರ್‌ನಲ್ಲಿ ನಡೆಸಲುದ್ದೇಶಿಸಲಾಗಿದ್ದು, ಆ ಸಂದರ್ಭದಲ್ಲಿ ಮೂಡುಪೆರಾರ, ಪಡುಪೆರಾರ, ಬಡಗುಳಿಪಾಡಿ, ತೆಂಕುಳಿಪಾಡಿ, ಮೊಗರು ಗ್ರಾಮಗಳ ವ್ಯಾಪ್ತಿಯ ಬಿಲ್ಲವ ಸಮಾಜ ಬಾಂಧವರ ಬೃಹತ್ ಸಮಾವೇಶ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ. ಸುನಿಲ್ ಗಂಜಿಮಠ ತಿಳಿಸಿದರು.

By suddi9

Leave a Reply

Your email address will not be published. Required fields are marked *