ಪೊಳಲಿ : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯಕ್ತ ಸೆ.17ರಂದು ಶನಿವಾರ ಬಿಜೆಪಿ ಅಮ್ಟಾಡಿ ಮಹಾಶಕ್ತಿಕೇಂದ್ರದ ವತಿಯಿಂದ ಪೊಳಲಿ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು.

ಭಜನಾ ಮಂಗಳದ ನಂತರ ಶ್ರೀ ದೇವಿಯ ಸನ್ನಿದಾನದಲ್ಲಿ ಸರ್ವಲಂಕಾರ ಪೂಜೆ ಹಾಗೂ ಗುಡನ್ನ ಪಾಯಸ ಸೇವೆ ನೆರವೇರಿತು,

ಈ ಪೂಜಾ ಕೈಂಕರ್ಯದಲ್ಲಿ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವೆಂಕಟೇಶ್ ನಾವಡ ಪೊಳಲಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಯಶವಂತ ಕೋಟ್ಯಾನ್ ಕಲ್ಕುಟ, ಯುವ ಮೋರ್ಚ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಕಿಶೋರ್ ಪಲ್ಲಿಪಾಡಿ ,ಅಮ್ಟಾಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷೆ ಚಂದ್ರಾವತಿ ಪೊಳಲಿ, ಮಹಿಳಾ ಮೋರ್ಚ ಅದ್ಯಕ್ಷೆ ಭಾರತಿ ಚೌಟ, ಬಡಗಬೆಳ್ಳೂರು ಗ್ರಾಮ ಪಂಚಾಯತ್ ಉಪಾದ್ಯಕ್ಷೆ ಮಮತ ಬಡಗಬೆಳ್ಳೂರು ,ಪೊಳಲಿ ಬೂತ್ ನ ಅದ್ಯಕ್ಷರಾದ ನವೀನ್ ಕಟ್ಟಪುಣಿ ಮತ್ತಿತರರು ಉಪಸ್ಥಿತರಿದ್ದರು.
