ಕೈಕಂಬ : ಒಳನಾಡು ಮೀನುಗಾರಿಕೆ ಹಾಗೂ ಮೀನು ತಳಿಗಳ ಅಭಿವೃದ್ಧಿ ತಜ್ಞ, ಭಾರತೀಯ ಸುಗಂಧಗಳಾದ ಊದ್, ಹರ್ಮಲ್, ಬಖೂರ್‌ಗಳಲ್ಲಿ ಹೊಸ ಆವಿಷ್ಕಾರ ನಡೆಸಿರುವ ಮಂಗಳೂರು ಜೇಮ್ಸ್ ಗೇಟ್ ಜುಯವೆಲ್ಲರ್ಸ್ ನ ಮಾಲಕ, ಪುತ್ತೂರು ಮುರ ನಿವಾಸಿ ಡಾ. ಎಂ. ಸೈಯ್ಯದ್ ನಝೀರ್ ಅವರಿಗೆ ಮುಂಬೈಯಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಜೀನಿಯಸ್ ಐಕಾನ್ ಅಚೀವರ್ಸ್’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರದಾನಿಸಲಾಯಿರತು.

ಮಂಗಳೂರು ಪಿಲಿಕುಳ ಸರೋವರದ ಸಹಿತ ಕೆಲವು ಕಡೆ ಕೆರೆಗಳಲ್ಲಿ ಮೀನಿನ ಸಂತಾನೋತ್ಪತ್ತಿ ಹಾಗೂ ಮೀನು ಹಿಡಿದು ಮಾರಾಟ ಮಾಡುವುದರಲ್ಲಿ ಜನಪ್ರಿಯರಾಗಿರುವ ಇವರು ನೂರಾರು ಕೆರೆ, ಸರೋವರಗಳ ನೈರ್ಮಲ್ಯಕ್ಕೆ ಒತ್ತು ನೀಡಿರುವುದಲ್ಲದೆ, ಸದ್ದುಗದ್ದಲವಿಲ್ಲದೆ ನಿರಂತರ ಪರಿಸರ ಸ್ನೇಹಿ ಕೆಲಸ ಮಾಡುತ್ತಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಐಜಿಐಎಎ ಭಾರತದ ರಾಯಭಾರಿ ಮತ್ತು ನಿರ್ದೇಶಕ ಡಾ. ಅನಿಲ್ ನಾಯರ್ ಥಂಪಿ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿರುವ ಆ್ಯಂಕರ್ ಡಾ. ವೈಭವ್ ಡಾ. ವೈಭವ್ ಶರ್ಮ, ಮಿಸ್ ಮೋನಾ ಗೊನ್ಸಾಲ್ವಿಸ್, ಖ್ಯಾತ ಛಾಯಾಗ್ರಾಹಕರಾದ ಆನಂದ ಯತಿನ್ ಸಂಪತ್, ದೀಪಕ್ ಎಚ್. ವಾಧ್ವಾನಿ, ಕೇಂದ್ರ ಸಚಿವ ರಾಮದಾಸ ಅಠವಳೆ, ಹಿರಿಯ ನಟ ಪ್ರೇಮ್ ಚೋಪ್ರಾ, ನಟ ಮುಕೇಶ್ ರಿಷಿ, ಗಾಯಕ ನಕ್ಕಾಶ್ ಅಝೀಝ್, ಮರಾಠಿ ಚಿತ್ರನಟ ವಿಜಯ್ ಪಾಟ್ಕರ್, ದಿಪಾಲಿ, ಅಂಶಿಕಾ ರೈ, ಪೂಜಾ ಮಿಶ್ರಾ, ವಿವೇಕ ಜೇತಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *