ಸುದ್ದಿ9:ಬಂಟ್ವಾಳ ತಾಲೂಕಿನ ಜುಮಾದಿಗುಡ್ಡೆ ಗಣಪತಿ ಕಟ್ಟೆಯ ಹಿಂದೂ ಸೇವಾ ಸಂಘದ ವತಿಯಿಂದ ಬ್ರಹ್ಮರಕೂಟ್ಲು ಬ್ರಹ್ಮಸನ್ನಿಧಿಯಲ್ಲಿ ನ.23ಭಾನುವಾರ ಕಾರ್ಯಕ್ರಮ ಸಂಘಟಕ ರಾಜೇಶ್ ನಾಕ್ ಉಳೇಪಾಡಿಗುತ್ತು ಇವರ ಮಾರ್ಗದರ್ಶನದಲ್ಲಿ “ತುಳುನಾಡ್ಡ್ ಕೃಷಿ ಕ್ರಾಂತಿ” ಕೆಸರ್ಡೊಂಜಿ ದಿನ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಉದ್ಘಾಟನೆಯನ್ನು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಉದ್ಘಾಟಿಸಿದರು. ಉಡುಪಿ ಲೋಕಸಭೆ ಸಂಶದೆ ಶೋಬಾ ಕರಂದ್ಲಾಜೆ, ಮಂಗಳೂರು ಲೋಕಸಭೆ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ನಾಗರಾಜ ಶೆಟ್ಟಿ,ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ರುಕ್ಮಯ ಪೂಜಾರಿ,
ಕಮಲಪ್ರಭಾಕರ ಭಟ್, ಸುಲೋಚನಾ ಭಟ್, ಉಮಾನಾಥ ಕೋಟ್ಯಾನ್, ಜಿ ಆನಂದ, ದೇವಪ್ಪ ಪೂಜಾರಿ , ದೇವ್ದಾಸ್ ಶೆಟ್ಟಿ, ಪುರುಷ ಸಾಲಿಯಾನ್ , ಚರಣ್ ಜುಮಾದಿಗುಡ್ಡೆ, ಮುಂತಾದವರು ಭಾಗವಹಿಸಿದ್ದರು.












