ಬಂಟ್ವಾಳ :ಸರ್ಕಾರಿ ಅಧಿಕಾರಿಗಳು ಜನಸಾಮಾನ್ಯರನ್ನು ಅನಗತ್ಯವಾಗಿ ಪೀಡಿಸುವ ಬದಲಾಗಿ ಜನಸ್ನೇಹಿಯಾಗಿ ಮಾನವೀಯತೆ ಮತ್ತು ಸಮಾಜ ಸೇವಾ ಮನೋಭಾವ ರೂಢಿಸಿಕೊಂಡಾಗ ಅವರು ಎಲ್ಲರಿಂದಲೂ ಹೆಚ್ಚಿನ ಗೌರವಕ್ಕೆ ಪಾತ್ರರಾಗುತ್ತಾರೆ ಎಂದು ಜಿ.ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ ಹೇಳಿದ್ದಾರೆ.
ತಾಲ್ಲೂಕಿನ ಸಜಿಪಮೂಡ ಗ್ರಾಮ ಪಂಚಾಯಿತಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ದಂಪತಿಯನ್ನು ಸನ್ಮಾನಿಸಿ ಅವರು ಮಾತನಾಡಿದರು.

ತಾ.ಪಂ.ಅಧ್ಯಕ್ಷ ಯಶವಂತ ಡಿ. , ಒಕ್ಕೂಟ ಅಧ್ಯಕ್ಷ ದೇವದಾಸ್ ಭಂಡಾರಿ ಮತ್ತಿತರರು ಶುಭ ಹಾರೈಸಿದರು. ಗ್ರಾ.ಪಂ.ಅಧ್ಯಕ್ಷೆ ಸುಂದರಿ, ಉಪಾಧ್ಯಕ್ಷೆ ಗೀತಾ, ತಾ.ಪಂ.ಸದಸ್ಯ ಶರೀಫ್, ವಸುಂದರಾ ಮಲ್ಲೇಸ್ವಾಮಿ, ಕೃಷಿಕರಾದ ಶ್ರೀನಿವಾಸ್ ಭಟ್, ಕೃಷ್ಣ ಭಟ್, ಲೋಲಾಕ್ಷಿ ಎಸ್.ಪೂಂಜ, ದೇವಿಪ್ರಸಾದ್ ಪೂಂಜ, ಅಬ್ದುಲ್ ಕರೀಂ, ಸುಶೀಲ, ಮುಂಡಪ್ಪ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯ ಬಿ.ಉಮರ್ ಸ್ವಾಗತಿಸಿ, ಬಿ.ಎಸ್.ಅಬೂಬಕ್ಕರ್ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.