ಬಂಟ್ವಾಳ:ಬಂಟ್ವಾಳ ಪುರಸಭೆ ಸಾಮಾನ್ಯಸಭೆಯಲ್ಲಿ ನಡೆಯುವ ಕೆಲವೊಂದು ನಿರ್ಣಯ ಮತ್ತೆ ತಿದ್ದುಪಡಿಯಾಗುತ್ತಿದ್ದು, ಅನುದಾನ ಹಂಚಿಕೆಯಲ್ಲಿ ಕೂಡಾ ಕ್ರಿಯಾಯೋಜನೆ ಸಿದ್ಧಪಡಿಸುವ ವೇಳೆ ತಾರತಮ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕಳೆದ ಎರಡು ಸಭೆಗಳಿಗೆ ಗೈರು ಹಾಜರಾಗಿದ್ದ ವಿರೋಧ ಪಕ್ಷ (ಬಿಜೆಪಿ) ಸದಸ್ಯರು ಸೋಮವಾರ ನಡೆದ ಸಾಮಾನ್ಯಸಭೆಗೆ ಹಾಜರಾಗುವ ಮೂಲಕ ಆಡಳಿತ ಪಕ್ಷ ಸದಸ್ಯರಿಗೆ ಅಚ್ಚರಿ ಮೂಡಿಸಿದರು.

 

8btl-1

1
ಪುರಸಭಾಧ್ಯಕ್ಷೆ ವಸಂತಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ಬಿಜೆಪಿ ಸದಸ್ಯರು ನಿರಂತರವಾಗಿ ಮೂರು ಸಭೆಗೆ ಗೈರು ಹಾಜರಾಗಿದ್ದರೆ ಅವರ ಸದಸ್ಯತ್ವ ರದ್ದುಪಡಿಸಲು ಸಿದ್ಧತೆ ನಡೆಸುತ್ತಿದ್ದ ಆಡಳಿತಾರೂಢ ಕಾಂಗ್ರೆಸ್ ಸದಸ್ಯರಿಗೆ ನಿರಾಶೆ ಮೂಡಿಸಿದರು.
ಬಿಜೆಪಿ ಸದಸ್ಯ ಬಿ.ದೇವದಾಸ ಶೆಟ್ಟಿ ಮಾತನಾಡಿ, ನಿರ್ಣಯ ಪ್ರತಿಯನ್ನು ಸಭೆ ಮುಗಿದ ಕೂಡಲೇ ಮುಖ್ಯಾಧಿಕಾರಿ ಸಹಿಯೊಂದಿಗೆ ಸದಸ್ಯರಿಗೆ ನೀಡಲು ಆಗ್ರಹಿಸಿದರು. ಪುರಸಭಾಧ್ಯಕ್ಷರ ವಾಡರ್ಿನಲ್ಲಿ ಕುಡಿಯುವ ನೀರಿನ ಪೈಪ್ ಮತ್ತಿತರ ದುರಸ್ತಿ ಬಿಲ್ಲು ಪಡೆಯುವಲ್ಲಿ ಅವ್ಯವಹಾರವಾಗಿದೆ ಎಂದು ಬಿಜೆಪಿ ಸದಸ್ಯ ಎ.ಗೋವಿಂದ ಪ್ರಭು ಆರೋಪಿಸಿದರು. ಇನ್ನೊಂದೆಡೆ ಆಡಳಿತ ಪಕ್ಷ ಸದಸ್ಯ ರಾಮಕೃಷ್ಣ ಆಳ್ವ ಮಾತನಾಡಿ, ತನ್ನ ವಾಡರ್ಿನಲ್ಲಿ ಕೈಗೊಂಡಿರುವ ಕೆಲವೊಂದು ಕುಡಿಯುವ ನೀರಿನ ಕಾಮಗಾರಿಗಳ ಬಗ್ಗೆ ತನ್ನ ಗಮನಕ್ಕೆ ಬಂದಿಲ್ಲ ಎಂದು ದೂರಿದರು.
ಶೇ.7.25 ಯೋಜನೆಯಡಿ ವಿದ್ಯಾಥರ್ಿವೇತನ ಆಯ್ಕೆ ಪಟ್ಟಿ ರದ್ದುಗೊಳಿಸಿ ಮತ್ತೆ ಅಜರ್ಿ ಕರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು. ಸದಸ್ಯರಾದ ವಾಸು ಪೂಜಾರಿ, ಸದಾಶಿವ ಬಂಗೇರ, ರಾಮಕೃಷ್ಣ ಆಳ್ವ, ಜಗದೀಶ ಕುಂದರ್, ಪ್ರವೀಣ ಜಕ್ರಿಬೆಟ್ಟು ಮತ್ತಿತರರು ಚಚರ್ೆಯಲ್ಲಿ ಪಾಲ್ಗೊಂಡರು.
ಉಪಾಧ್ಯಕ್ಷೆ ಯಾಸ್ಮಿನ್, ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಪ್ರಭಾದೇವಿ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *