ಸುದ್ದಿ9 ಗಂಜಿಮಠ:ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿಯ ಮೈದಾನದಲ್ಲಿ “ರೋಯಲ್ ಫ್ರೆಂಡ್ಸ್ ಗಂಜಿಮಠ” ಇದರ ಪಂಚಮ ವರ್ಷದ ವಾರ್ಷಿಕೋತ್ಸವ. ಬಡರೋಗಿಗಳ ಮತ್ತು ಬಡ ವಿದ್ಯಾರ್ಥಿಗಳ ಸಹಾಯಾರ್ಥವಾಗಿ ಜ.1 ರಂದು ಜರಗಿತು.ಅಲ್ಲದೆ ರೋಯಲ್ ಫ್ರೆಂಡ್ಸ್ನ ಅಧ್ಯಕ್ಷರೂ ಮತ್ತು ಶುಭ ಅರ್ಥ್ ಮೂವರ್ಸ್ ಮತ್ತು ಕ್ರೇನ್ಸ್ನ ಮಾಲಕರಾದ ಶ್ರೀಯುತ ಸುನಿಲ್ ಫೆರ್ನಾಂಡಿಸ್ ಗಂಜಿಮಠ ಮತ್ತು ಉಪಾಧ್ಯಕ್ಷರಾದ ಗಣೇಶ್ ಪೂಜಾರಿ ಮೊಗರು (ಕಿಲಾಡಿ) ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ಅನಾರೋಗ್ಯ ಸಂಕಷ್ಟ ಪೀಡಿತರಾಗಿ ಬಳಲಿ ಜೀವನ ಸಾಗಿಸುತ್ತಿರುವ ನಮ್ಮ ಪರಿಸರದ ಬಡರೋಗಿಗಳ ಬದಿಕಿನಲ್ಲೂ ಆಶಾವಾದ ಮೂಡಿಸುವ ದಿಶೆಯಲ್ಲಿ ಬಡರೋಗಿಗಳಿಗೆ ಮತ್ತು ಬಡವಿದ್ಯಾರ್ಥಿಗಳಿಗೆ (5ಜನ ಬಡರೋಗಿಗಳು) (2ಜನ ಬಡವಿದ್ಯಾರ್ಥಿಗಳು) ವಾರ್ಷಿಕೋತ್ಸವದಲ್ಲಿ ಉಳಿಕೆಯಾದ 90 ಸಾವಿರ ರೂಪೈಯನ್ನು ನಗದು ಸಹಾಯಧನ ರೂಪದಲ್ಲಿ ನೀಡಿ ಸಹಕರಿಸಲಾಯಿತು.
ಮನೋರಂಜನೆಯೊಂದಿಗೆ ಸಾಮಾಜಿಕ ಕಳಕಳಿಯನ್ನು ಫೆಂಡ್ಸ್ನ ಪ್ರಯತ್ನ ಶ್ಲಾಘನೀಯ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ದಾನಿಗಳಿಂದ ಸಂಗ್ರಹಿಸಿದ ಹಣವನ್ನು ಬಡರೋಗಿಗಳಿಗೆ ನೀಡಿ ಅವರಿಗೆ ಬೆನ್ನೆಲುಬಾಗಿ ನಿಂತಿರುವ ಇಂತಹ ಸಂಘಟನೆಗಳಿಗೆ ನಾವೆಲ್ಲ ಕೈಜೋಡಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಅಲ್ಲದೆ ನಾನು ಸದಾ ನಿಮ್ಮೊಂದಿಗಿದ್ದೇನೆ ಎಂದು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಾಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀಯುತ ಗೋಪಲ ಕೃಷ್ಣ ಬೇಳೂರು ನುಡಿದರು.
ಇಂದಿನ ಒತ್ತಡದ ಬದುಕಿನಲ್ಲಿ ನಮ್ಮತನವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಹಣಗಳಿಕೆಯಿಂದಷ್ಟೇ ಸಂತೋಷ ದೊರೆಯುವುದಿಲ್ಲ, ಸಂತೋಷ ಕೊಡುವ ಇಂತಹ ಕೆಲಸದ ಜೊತೆ ಸಮಾಜಮುಖಿ ಚಿಂತನೆಯ ಕೆಲಸಗಳನ್ನು ಮಾಡಲು ನಾವೆಲ್ಲ ಮನಸ್ಸು ಮಾಡಬೇಕಾಗಿದೆ. ಎಂದು ಅಧ್ಯಕ್ಷ ಸ್ಥಾನವನ್ನು ವಹಿಸಿ ಶ್ರೀಯುತ ಕೃಷ್ಣ ಜೆ.ಪಾಲೆಮಾರ್ ಕರೆನೀಡಿದರು.
ಬಡರೋಗಿಗಳ ನೈಜ ಭಾವನೆಗಳ ಜತೆ ಸ್ಪಂದಿಸಿ ಅವರ ಕಣ್ಣೀರ ಒರಸಲು ಕಾರ್ಯೋನ್ಮುಖರಾದ ರೋಯಲ್ ಫ್ರೆಂಡ್ಸ್ ನ ಕಾರ್ಯಕ್ರಮವನ್ನು ಶ್ಲಾಘಿಸಿ ಇಂತಹ ಕಾರ್ಯಕ್ರಮಗಳಿಗೆ ಸಹಾ ನಾನು ಸ್ಪಂದಿಸುತ್ತೇನೆ ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಈ ಕ್ಷೇತ್ರದ ಶಾಸಕರಾದ ಶ್ರೀಯುತ ಮೊದಿನ್ ಬಾವಾ ಭರವಸೆಯಿತ್ತರು.
ನಂತರ ಬಡರೋಗಿಗಳ ಸಹಾಯಾರ್ಥವಾಗಿ ದೇವದಾಸ್ ಕಾಪಿಕಾಡ್ ಮಂಗಳೂರು ಇವರ ಕಲಾತಂಡದಿಂದ “ಪೋಡ್ಯೊಡ್ಚಿ ಯಾನುಲ್ಲೆ..” ನಾಟಕ ಮತ್ತು ಕಲಾಸ್ಪರ್ಶ ಡ್ಯಾನ್ಸ್ ಅಕಾಡೆಮಿ ಗಂಜಿಮಠ ಇವರಿಂದ ವೈವಿದ್ಯಮಯ ನೃತ್ಯ ಕಾರ್ಯಕ್ರಮ ಕಿಕ್ಕಿರಿದ ಜನಸಂದಣಿಯಲ್ಲಿ ಜರಗಿದವು.
ಕಾರ್ಯಕ್ರಮದ ಮೊದಲಿಗೆ ರೋಯಲ್ ಫೆಂಡ್ಸ್ನ ವಿ.ಶಿವರಾಯ ಪ್ರಭು ಗಂಜಿಮಠ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನು ಆಡಿ, ಕೊನೆಯಲ್ಲಿ ವಂದಿಸಿದರು. ಕಾರ್ಯಕ್ರಮವನ್ನು ಶ್ರೀ ಸುರೇಶ್ ಅಂಚನ್ ಮೂಡುಪೆರಾರ್ ನಿರ್ವಹಿಸಿದರು. ಶ್ರೀ ಸುನಿಲ್ ಫೆರ್ನಾಂಡಿಸ್ ಗಂಜಿಮಠ ಸಂಘಟಿಸಿದರು.
ವೇದಿಕೆಯಲ್ಲಿ ಸಾಮಾಜಿಕ ಕ್ಷೇತ್ರದಲ್ಲಿ ಮತ್ತು ವ್ರತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.


