ಬೆಂಗಳೂರು: ಜನವರಿ 26ರ ಗಣರಾಜ್ಯೋತ್ಸವ ದಿನದಂದು ಅಮೇರಿಕಾದ ಅಧ್ಯಕ್ಷ ಬಾರಕ್ ಒಬಾಮ ಅವರ ಭಾರತ ಭೇಟಿಯ ಸಂದರ್ಭದಲ್ಲಿ ದೇಶದಲ್ಲಿ ವಿವಿಧ ಕಡೆ ಸ್ಫೋಟಿಸಿ ರಕ್ತಸಿಕ್ತ ಸ್ವಾಗತ ನೀಡಲು ಯತ್ನಿಸಿದ್ದರು ಎಂದು ಬಂಧಿತ ಭಯೋತ್ಪಾದಕರು ತಿಳಿಸಿದ್ದಾರೆ.

ಈಗಾಗಲೇ ಪೊಲೀಸ್ ವಶದಲ್ಲಿರುವ ಸುಬೂರ್, ಅಫಾಕ್, ಸದ್ದಾಂ ಹುಸೇನ್ ಹಾಗೂ ರಿಯಾಝ್ ಪೊಲೀಸ್ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದು, ಬೆಂಗಳೂರು, ಹೈದರಾಬಾದ್, ಹಾಗೂ ದೆಹಲಿಯಲ್ಲಿ ಸ್ಫೋಟ ನಡೆಸಿ ಒಬಾಮಾ ಅವರಿಗೆ ರಕ್ತಸಿಕ್ತ ಸ್ವಾಗತ ನೀಡಲು ಸಿದ್ಧತೆ ನಡೆಸಿದ್ದರು. ಅದಕ್ಕಾಗಿ ಸ್ಫೋಟಕಗಳನ್ನು ಮೊದಲೇ ಸಿದ್ಧಪಡಿಸಿದ್ದು, ಪೊಲೀಸರು ಬಂಧಿಸದೇ ಇರುತ್ತಿದ್ದರೆ ದೇಶದಲ್ಲಿ ಸರಣಿ ಸ್ಫೋಟ ನಡೆಸುವ ಸಾಧ್ಯತೆ ಇತ್ತು ಎನ್ನಲಾಗಿದೆ.
