ಸುದ್ದಿ9 ಮೂಡುಬಿದಿರೆ: ರಾಜೀವಗಾಂಧಿಆರೋಗ್ಯ ವಿಜ್ಞಾನ ವಿ.ವಿ. ಬೆಂಗಳೂರು, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕರ್ನಾಟಕ ಸರಕಾರದ ಜಂಟಿ ಸಹಯೋಗದಲ್ಲಿ 75ನೇ ಅಖಿಲ ಭಾರತಅಂತರ್ ವಿ.ವಿ. ಅಥ್ಲೆಟಿಕ್ಸ್ ಇಲ್ಲಿನ ಸ್ವ್ವರಾಜ್ಯ ಮೈದಾನದಲಿನ ನೂತನ ಸಿಂಥೆಟಿಕ್ ಟ್ರ್ಯಾಕ್‍ನಲ್ಲಿ ಶುಕ್ರವಾರ ಶುಭಾರಂಭಗೊಂಡಿತು. ರಾಜೀವ್‍ಗಾಂಧಿಆರೋಗ್ಯ ವಿಜ್ಞಾನ ವಿವಿಯ ಉಪಕುಲಪತಿ ಪ್ರೊ.ಕೆ.ಎಸ್.ರವೀಂದ್ರನಾಥ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿಕ್ಷಣದ ಜತೆಗೆ ಕ್ರೀಡೆ ಮತ್ತು ಸಾಂಸ್ಕ್ರತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಿವೆ. ಸ್ಪರ್ಧಾತ್ಮಕ ಬದುಕಿನ ಸವಾಲುಗಳನ್ನು ಸ್ವೀಕರಿಸಿ ಜೀವನದಲ್ಲಿ ಬೆಳೆಯಲು ಕ್ರೀಡೆ ಸಹಕಾರಿಯಾಗಿದ್ದು ಶಿಸ್ತುಬದ್ಧ ಸುಮ£ಸ್ಸಿನ ಶರೀರ ಹೊಂದಲು ನೆರವಾಗುತ್ತವೆ ಎಂದರು.
ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಡಾ. ಎಂ. ಮೋಹನ ಆಳ್ವ ಹೋಬಳಿ ಮಟ್ಟದಲ್ಲಿರುವ ಮೂಡುಬಿದಿರೆಯಲ್ಲಿನ ಕ್ರೀಡಾ ಚಟುವಟಿಕೆಗಳು ಮತ್ತು ಕ್ರೀಡಾಪಟುಗಳ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ, ಕ್ರೀಡಾ ಸಚಿವರ ವಿಶೇಷ ಮುತುವರ್ಜಿಯಲ್ಲಿ ಕೊಡುಗೆಯಾಗಿ ಲಭಿಸಿರುವ ಇಲ್ಲಿನ ಸಿಂಥೆಟಿಕ್ ಟ್ರ್ಯಾಕ್ ಹಂತ ಹಂತವಾಗಿ ಮೇಲ್ದರ್ಜೆಗೇರಿಸುವ ಯೋಜನೆ ಇದೆ ಎಂದರು.
ಉದ್ಘಾಟನಾ ಸಮಾರಂಭಕ್ಕೂ ಮೊದಲು ನಡೆದ ಧ್ವಜಾರೋಹಣ ಸಮಾರಂಭದಲ್ಲಿ ವಿವಿಯ ಉಪಕುಲಪತಿ ಪ್ರೊ.ಕೆ.ಎಸ್.ರವೀಂದ್ರನಾಥ್, ಭಾರತೀಯ ವಿವಿಗಳ ಅಸೋಸಿಯೇಶನ್ ಪರಿವೀಕ್ಷಕ ಪ್ರೊ. ಎಂ.ಎಸ್. ಚಂದ್ರಾವತ್ , ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಭಾರತೀಯ ವಿವಿಗಳ ಅಸೋಸಿಯೇಶನ್, ರಾಜೀವಗಾಂಧಿ ವಿವಿ, ಹಾಗೂ ಅತಿಥೇಯ ಆಳ್ವಾಸ್‍ನ ಧ್ವಜಾರೋಹಣ ನೆರವೇರಿಸಿದರು. ಬಳಿಕ ನಡೆದ ಆಕರ್ಷಕ ಪಥ ಸಂಚಲನದಲ್ಲಿ ಕಳೆದ ಬಾರಿಯ ಚಾಂಪಿಯನ್ ಪಂಜಾಬ್ ವಿವಿ ಪಟಿಯಾಲ ತಂಡದ ನೇತೃತ್ವದಲ್ಲಿ ವಿವಿಧ ವಿ.ವಿಗಳ ಕ್ರೀಡಾಪಟುಗಳು, ಆಳ್ವಾಸ್‍ನ ಕ್ರೀಡಾ ಸಾಧಕರು, ಕಲಾ ಪ್ರಾಕಾರ ವೈವಿಧ್ಯಗಳು ಗಮನ ಸೆಳೆದದವು. ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ನಾಗಾಂಬಿಕಾ ದೇವಿ ಕ್ರೀಡಾ ಪಟುಗಳಿಂದ ನಡೆದ ಪಥ ಸಂಚಲನದಲ್ಲಿ ಗೌರವವಂದನೆ ಸ್ವೀಕರಿಸಿದರು.
ಮಂಗಳೂರು ವಿವಿಯ ಉಪಕುಲಪತಿ ಪ್ರೊ.ಭೈರಪ್ಪ, ಯುವಜನ ಸೇªಗುಂಟೂರಿನ ನಾಗಾರ್ಜುನ ವಿಶ್ವವಿದ್ಯಾಲಯದದೈಹಿಕ ಶಿಕ್ಷಣ ನಿರ್ದೇಶಕಡಾ.ಕಿಶೋರ್, ಮಾಜಿ ಸಚಿವ ಅಮರನಾಥ ಶೆಟ್ಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಶಿವಶೈಲಮ್, ಭಾರತೀಯ ವಿವಿಯ ಡಾ.ರಾಜ್‍ಕುಮಾರ್ ಶರ್ಮ, ಉಜಿರೆ ಶಿಕ್ಷಣ ಸಂಸ್ಥೆಗಳ ಡಾ.ಯಶೋವರ್ಮ, ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕ್ರೀಡಾ ಕೂಟಗಳ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ಸಲ್ಲಿಸುತ್ತಿರುವ 10 ವಿವಿಗಳು, ಹನ್ನೊಂದು ಕ್ರೀಡಾ ಸಾಧಕರ ಸಹಿತ ಕೋಚ್‍ಗಳಾಗಿ ಸಾಧನೆ ಮಾಡಿರುವ ಪುರುಷೋತ್ತಮ ಹಾಗೂ ದಿನೇಶ್ ಕುಂದರ್ ಅವರನ್ನು ಗೌರವಿಸಲಾಯಿತು.
ಮೂಡುಬಿದಿರೆಯ ಶ್ರೀ ವೆಂಕಟರಮಣ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಕ್ರೀಡಾ ಜ್ಯೋತಿಯನ್ನು ಕ್ರೀಡಾ ಸಾಧಕರಾದ ಅಭಿಷೇಕ್ ಎನ್.ಶೆಟ್ಟಿ, ಜಾಯ್ಲಿನ್ ಲೋಬೋ, ಬಸವರಾಜ ಹೊರಡ್ಡಿ, ಜಮಾಲುದ್ದೀನ್, ಹಾಗೂ ಕೆ.ಎಸ್. ಅಶೋಕ್ ಕ್ರೀಡಾಂಗಣಕ್ಕೆ ತಂದು ಅತ್ಲೀಟ್ ಎಂ.ಆರ್. ಪೂವಮ್ಮ ಕ್ರೀಡಾ ಜ್ಯೋತಿ ಬೆಳಗಿದರು. ರಾಜೀವಗಾಂಧಿಆರೋಗ್ಯ ವಿಜ್ಞಾನ ವಿವಿಯ ಸೃಜನಾ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು. ಅವಿಭಜಿತದ.ಕ.ಜಿಲ್ಲೆಯಲ್ಲಿಎರಡನೇ ಬಾರಿಗೆ ಈ ಬೃಹತ್‍ಕ್ರೀಡಾಕೂಟ ನಡೆಯುತ್ತಿದ್ದು ದೇಶದ 168 ವಿಶ್ವವಿದ್ಯಾನಿಲಯಗಳು 3390 ಕ್ರೀಡಾಪಟುಗಳು ಇಲ್ಲಿ ಸ್ಪರ್ಧಿಸುತ್ತಿದ್ದಾರೆ.
ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಕುಲ ಸಚಿವ ಡಾ.ಡಿ.ಪ್ರೇಮ್ ಕುಮಾರ್ ಸ್ವಾಗತಿಸಿದರು. ಪರೀಕ್ಷಾಂಗ ಕುಲ ಸಚಿವ ಡಾ. ಸಚ್ಚಿದಾನಂದ ವಂದಿಸಿದರು. ದೀಪಾ ಕೊಟ್ಟಾರಿ ಹಾಗೂ ಸತೀಶ್ ಬೆಂಗಳೂರು ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.
ಕ್ರೀಡಾಕೂಟವನ್ನು ಉದ್ಘಾಟಿಸಬೇಕಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದ ಮಾಜಿ ರಾಜ್ಯಪಾಲರ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಮರಳಿದ್ದು ಸಮಾರಂಭದ ಚಿತ್ರಣವನ್ನೇ ಬದಲಾಯಿಸಿತು. ಸಭೆಯಲ್ಲಿ ಭಾಗವಹಿಸಬೇಕಾಗಿದ್ದ ಸಚಿವರಾದಿ, ಸಂಸದರು ಗೈರುಹಾಜರಾಗಬೇಕಾಯಿತು. ಈ ಕ್ರೀಡಾಂಗಣದ ಅಭಿವೃಧ್ಧಿಯ ಮುಖ್ಯರೂವಾರಿ ರಾಜ್ಯದ ಕ್ರೀಡಾಸಚಿವ ಅಭಯಚಂದ್ರಜೈನ್, ಪುರಸಭಾಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ ಸಮಾರಂಭದಲ್ಲಿದ್ದರೂ ವೇದಿಕೆ ಏರಲಿಲ್ಲ. ಅಂತೂ ಇಂತೂ ರಾಜ್ಯದ ಮುಖ್ಯಮಂತ್ರಿಯಾಗಿ ಸಿಧ್ಧರಾಮಯ್ಯ ಮೂಡುಬಿದಿರೆಗೆ ನೀಡಲಿದ್ದ ಮೊದಲ ಅಧಿಕೃತ ಭೇಟಿ ರದ್ದುಗೊಂಡಿದ್ದು ಹಲವರ ನಿರಾಸೆಗೂ ಕಾರಣವಾಯಿತು.
