ಸುದ್ದಿ9 ಮೂಡುಬಿದಿರೆ: ಮಹಾವೀರ ಕಾಲೇಜಿನಲ್ಲಿ ಗುರುವಾರ ಸಂಜೆ ಮುಕ್ತಾಯಗೊಂಡ ಮಂಗಳೂರು ವಿವಿ ಮಟ್ಟದ ತುಳುನಾಡ ಸಿರಿ ಮದಿಪು–2015 ಸಾಂಸ್ಕೃತಿಕ ಸ್ಪರ್ಧೆಯ ಸಾಮೂಹಿಕ ವಿಭಾಗದಲ್ಲಿ ಸುಂಕದಕಟ್ಟೆಯ ಎಸ್.ಎನ್.ಎಸ್‌ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
12mood1_0(1)

ಮೂಡುಬಿದಿರೆಯ ಆಳ್ವಾಸ್‌ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರನ್ನರ್‌ಅಪ್‌ ಪ್ರಶಸ್ತಿ ಗೆದ್ದುಕೊಂಡಿತು. ಉಜಿರೆ ಎಸ್‌ಡಿಎಂ ಕಾಲೇಜು ತೃತೀಯ ಹಾಗೂ ಎಸ್‌.ಎನ್‌.ಎಸ್ ಸುಂಕದಕಟ್ಟೆ ತೃತೀಯ ಮತ್ತು ಮಂಗಳೂರು ಕೆನರಾ ಕಾಲೇಜು ಸಮಧಾನಕರ ಬಹುಮಾನ ಗೆದ್ದುಕೊಂಡಿವೆ.

ವೈಯುಕ್ತಿಕ ವಿಭಾಗ: ವರ್ಣಚಿತ್ರ ರಚನೆಯಲ್ಲಿ ಉಜಿರೆ ಎಸ್‌ಡಿಎಂನ ಪ್ರವೀಣ (ಪ್ರಥಮ), ಆಳ್ವಾಸ್‌ನ ಶುಭಕರ (ದ್ವಿತೀಯ). ಲಿಖಿತ ರಸಪ್ರಶ್ನೆ: ಅವಿನಾಶ್‌ ಎನ್‌, ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಪ್ರಥಮ), ಪ್ರಶಾಂತ್‌ ಎ.ಎಸ್‌ ಎಸ್‌ಡಿಎಂ ಉಜಿರೆ (ದ್ವಿತೀಯ). ತುಳು ಚಲನಚಿತ್ರ ಗಾಯನ:ಪವಿತ್ರ, ಆಳ್ವಾಸ್‌ ಕಾಲೇಜು (ಪ್ರಥಮ), ಮಲ್ಲಿಕಾ, ಎಸ್‌.ಎನ್‌.ಎಸ್‌ ಸುಂಕದ­ಕಟ್ಟೆ (ದ್ವಿತೀಯ), ರಂಗೋಲಿ: ರಕ್ಷಾ, ಆಳ್ವಾಸ್‌ ಮೂಡುಬಿದಿರೆ (ಪ್ರಥಮ), ಅಮೃತಾ, ಎಸ್‌.ಎನ್‌.ಎಸ್‌ ಸುಂಕದಕಟ್ಟೆ (ದ್ವಿತೀಯ) ಆಶುಭಾಷಣ: ಕೀರ್ತಿಕೆ, ಎಸ್‌.ಎನ್‌.ಎಸ್‌ ಸುಂಕದಕಟ್ಟೆ (ಪ್ರಥಮ), ಧೀರಜ್‌ ಕೆ.ಜಿ, ಎಸ್‌.ಡಿ.ಎಂ ಉಜಿರೆ (ದ್ವಿತೀಯ) ಮಹಾವೀರ ಕಾಲೇಜು, ಕರ್ನಾಟಕ ತುಳುಸಾಹಿತ್ಯ ಅಕಾಡೆಮಿ, ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಸ್ಪರ್ಧೆಗಳು ನಡೆದವು.  ಕಾಲೇಜಿನ ಪ್ರಾಚಾರ್ಯ ಪ್ರೊ.ಚಂದ್ರಶೇಖರ್‌ ದೀಕ್ಷಿತ್‌ ಅದ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.

ಉದ್ಯಮಿ ಅಬ್ದುಲ್‌ ರೆಹ್ಮಾನ್‌, ಸಂದೀಪ್‌ ಭಂಡಾರಿ ಮಂಗಳೂರು, ಕೆ.ವೆಂಕಟೇಶ ಕಾಮತ್‌ ಮೂಡುಬಿದಿರೆ, ತೀರ್ಪುಗಾರರಾದ ಪಿ.ಎನ್‌.ಮೂಡಿತ್ತಾಯ, ಪದ್ಮನಾಭ ಪೂಜಾರಿ ಮತ್ತು ಜಯರಾಮ ರೈ, ಪ್ರಧಾನ ಸಂಯೋಜಕರಾದ ಪ್ರೊ.ಹರೀಶ್‌, ನಳಿನಿ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ.ಮಧೂರು ಮೋಐಹನ ವಿದ್ಯಾರ್ಥಿ ನಾಯಕ ಸುಧೀಂದ್ರ ಪ್ರಭು ಮತ್ತಿತರರ ಉಪಸ್ಥಿತಿಯಲ್ಲಿ ವಿಜೇತರಿಗೆ ಬಹುಮಾನವನ್ನು  ವಿತರಿಸಲಾಯಿತು.

By suddi9

Leave a Reply

Your email address will not be published. Required fields are marked *