ಮೂಡುಬಿದರೆ: ಮಧ್ಯಪ್ರದೇಶ ಇಂದೋರ್ನ ದೇವಿ ಅಹಿಲ್ಯಾ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ 30ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಆಳ್ವಾಸ್ ತಂಡ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿ ರಂಗ ಮಾಂತ್ರಿಕ ಶ್ರೀ ಜೀವನ್ರಾಂ ಸುಳ್ಯ ನಿರ್ದೇಶಿಸಿರುವ `ದೇವ ವೃದ್ಧರು’ ಕಿರು ನಾಟಕ ಪ್ರಥಮಪ್ರಶಸ್ತಿ, ಮತ್ತುಏಕಾಂಕ ನಾಟಕ `ಬರ್ಬರೀಕ’ ದ್ವಿತೀಯ ಪ್ರಶಸ್ತಿ ಪಡೆದಿದೆ. ಜಾನಪದ ನೃತ್ಯ ವಿಭಾಗದಲ್ಲಿ ಪ್ರದರ್ಶಿಸಿದ ಬಂಜಾರ ನೃತ್ಯ ತೃತೀಯ ಪ್ರಶಸ್ತಿ ಪಡೆದಿದೆ.
30ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಆಳ್ವಾಸ್ ರಂಗ ತಂಡದಿಂದ ನಾಟಕ ಪ್ರದರ್ಶನ ನಡೆಯಿತು.

ಭಾರತೀಯ ವಿಶ್ವವಿದ್ಯಾನಿಲಯಗಳ ಒಕ್ಕೂಟ, ನವದೆಹಲಿ ಮತ್ತುಯುವಜನ ಸೇವೆ ಮತ್ತುಕ್ರೀಡಾ ಇಲಾಖೆ, ಭಾರತ ಸರಕಾರಇದರಜಂಟಿ ಆಶ್ರಯದಲ್ಲಿ ನಡೆದ ಸ್ಪರ್ಧೆಗಳಲ್ಲು ಐದು ವಲಯಗಳಿಂದ ಒಟ್ಟು ಹತ್ತು ವಿಶ್ವವಿದ್ಯಾನಿಲಯಗಳು ಸ್ಪರ್ಧಿಸಿದ್ದು, ಜೀವನ್ರಾಂ ಸುಳ್ಯರವರ ನಿರ್ದೇಶನದಲ್ಲಿ ಆಳ್ವಾಸ್ನ ನಾಟಕಗಳು ರಾಷ್ಟ್ರೀಯ ಯುವಜನೋತ್ಸವದಲ್ಲಿ ಭಾಗವಹಿಸಿ 9ನೇ ಬಾರಿ ರಾಷ್ಟ್ರೀಯರಂಗ ಪ್ರಶಸ್ತಿಯನ್ನು ಪಡೆದುದಾಖಲೆ ನಿರ್ಮಿಸಿದೆ.