ಮೂಡುಬಿದಿರೆ : ಪುತ್ತಿಗೆ ಗ್ರಾಮದ ಕೊಡ್ಯಡ್ಕದಲ್ಲಿ ಅನಧಿಕೃತವಾಗಿ ಕೆಂಪು ಕಲ್ಲಿನ ಕೋರೆ ನಡೆಯುತ್ತಿದ್ದು ಇದರಿಂದ ಬರುವ ಧೂಳು ಸುತ್ತಲಿನ ಪ್ರದೇಶಕ್ಕೆ ಆವರಿಸುತ್ತಿದ್ದು ಕೃಷಿಯ ಮೇಲೆ ವ್ಯಕ್ತಿರಿಕ್ತ ಪರಿಣಾಮ ಬೀರುತ್ತಿದೆ ಮತ್ತು ಜನರು ಅನಾರೋಗ್ಯ ಹೊಂದುತ್ತಿದ್ದಾರೆ ಇದರಿಂದಾಗಿ ಅನಧಿಕೃತವಾಗಿ ನಡೆಯುತ್ತಿರುವ ಈ ಕೆಂಪು ಕಲ್ಲಿನ ಕೋರೆಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಬಾಲಕೃಷ್ಣ ಭಟ್ ಎಂಬವರು ಮೂಡುಬಿದಿರೆ ತಹಶೀಲ್ದಾರ್ ಮಹಮ್ಮದ್ ಇಸಾಕ್ ಅವರಿಗೆ ಬುಧವಾರ ದೂರು ನೀಡಿದ್ದಾರೆ.
18 mood kore (1)

18 mood kore (2)

ಸವರ್ೆ ನಂಬರ್ 516/03ರಲ್ಲಿ ಕೊಡ್ಯಡ್ಕದ ದೇವೇಂದ್ರ ನಾಯಕ್ ಎಂಬವರು ಅನಧಿಕೃತವಾಗಿ ಕಲ್ಲಿನ ಕೋರೆಯನ್ನು ನಡೆಸುತ್ತಿರುವ ವ್ಯಕ್ತಿ. ಇವರ ಸದ್ರಿ ಸ್ಥಳದ ಬಳಿಯಲ್ಲಿ 516/05ರಲ್ಲಿ ಬಾಲಕೃಷ್ಣ ಭಟ್ ಅವರ 1-27 ಎಕ್ರೆ ಜಾಗವಿದ್ದು ಅದರಲ್ಲಿ ಅಡಿಕೆ, ತೆಂಗು, ಬಾಳೆ ಕೃಷಿಯನ್ನು ಮಾಡುತ್ತಿದ್ದು ಕೃಷಿಗೆ ಧೂಳು ಆವರಿಸಿಕೊಂಡಿದೆ ಮತ್ತು ಕುಡಿಯುವ ನೀರು ಕಲುಷಿತಗೊಳ್ಳುತ್ತಿದೆ ಇದರಿಂದಾಗಿ ಕುಟುಂಬ ಸದಸ್ಯರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗೂ ಮನೆಯಿಂದ ಈ ಕೋರೆಯು ಕೇವಲ 50 ಮೀಟರ್ ಅಂತರದಲ್ಲಿದೆ. ಬೆಳಿಗ್ಗೆ 7ರಿಂದ ಸಂಜೆ 6 ಗಂಟೆ ವರೆಗೆ ನಿರಂತರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಈ ಪ್ರದೇಶದಲ್ಲಿ ಜಾನುವಾರುಗಳು ಅಡ್ಡಾಡುವುದರಿಂದ ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ಅವುಗಳಿಗೂ ಅಪಾಯ ಎದುರಾಗುವ ಸಂಭವವಿದೆ ಈ ಎಲ್ಲಾ ವಿಷಯಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಲಬೇಕೆಂದು ಆಗ್ರಹಿಸಿ ಬಾಲಕೃಷ್ಣ ಭಟ್ ಅವರು ಕ್ರಮವನ್ನು ಕೈಗೊಳ್ಳದಿದ್ದರೆ ಮುಂದೆ ಆಗುವ ಯಾವುದೇ ರೀತಿಯ ಅನಾಹುತಕ್ಕೆ ನಾವು ಜವಾಬ್ದಾರರಾಗಿರುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *