ನವದೆಹಲಿ : ಆಮ್ ಅದ್ಮಿ ಪಕ್ಷದ ನಿರ್ಣಾಯಕ ರಾಜಕೀಯ ಸಮಿತಿಯಿಂದ ಯೋಗೇಂದ್ರ ಯಾದವ್ ಹೊರಬಹುದು ಎಂಬ ಮುನ್ಸೂಚನೆ ಮಧ್ಯೆಯೇ ಪಕ್ಷದ ಆಂತರಿಕ ಲೋಕಪಾಲ ಆಡ್ಮಿರಲ್ ಎಲ್. ರಾಮದಾಸ್ ಅವರು ಆಪ್’ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸ್ಫೋಟ ಪತ್ರ ಬರೆದಿದ್ದಾರೆ.
ಪಕ್ಷದ ಮುಖಂಡರಿಗೆ ಇ-ಮೇಲ್ ಮೂಲಕ ಪತ್ರ ಬರೆದಿರುವ ರಾಮದಾಸ್, ಕೇಜ್ರಿವಾಲ್ ಅವರು ಎರಡೆರಡು ಸ್ಥಾನಗಳನ್ನು ಹೊಂದಿದ್ದಾರೆ. ಪಕ್ಷದ ಸಂಚಾಲಕ ಮತ್ತು ದಿಲ್ಲಿ ಸಿಎಂ-ಎರಡೂ ಹುದ್ದೆಗಳು ಅವರ ಬಳಿ ಇವೆ. ಇದೆಂಥಾ ಅಧಿಕಾರ ವಿಕೇಂದ್ರಿಕರಣ? ಎರಡರಲ್ಲಿ ಒಂದಕ್ಕೆ ಕೇಜ್ರಿವಾಲ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ, ಕೇಜ್ರಿವಾಲ್ ಸಂಪುಟ ‘ಬಾಯ್ಸ್ ಕ್ಲಬ್ ಇದ್ದಂತಿದೆ. ಓರ್ವ ಮಹಿಳೆಯು ಸಂಪುಟದಲ್ಲಿ ಇಲ್ಲ ಎಂದು ರಾಮದಾಸ್ ಮೂದಲಿಸಿದ್ದಾರೆ. ಒಟ್ಟಿನಲ್ಲಿ, ಎರಡರಲ್ಲಿ ಒಂದು ಸ್ಥಾನಕ್ಕೆ ಕೇಜ್ರಿವಾಲ್ ರಾಜಿನಾಮೆ ನೀಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಇದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲಾ ಎಂಬುದನ್ನು ತೋರಿಸುತ್ತಿದೆ.