ಸುದ್ದಿ9 ಕೈಕಂಬ: ಶ್ರೀ ಕಾಲಬೈರವ, ಮಂಜುನಾಥೇಶ್ವರ ದೇವಸ್ಥಾನ ಜೋಗಿಮಠ, ಮಳಲಿ ಮಟ್ಟಿ ಇದರ ವಾರ್ಷಿಕ ಜಾತ್ರಾ ಮಹೋತ್ಸವವು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಯೋಗಿರಾಜ “ಸಂಧ್ಯಾನಾಥ್ ಮಹಾರಾಜ್” ಜೋಗಿಮಠ, ಕದ್ರಿ ಇವರ ಆಶಿರ್ವಾದದೊಂದಿಗೆ (ಮಾ.08)ಮೊದಲ್ಗೊಂಡು ಮಾ.09 ಸೋಮವಾರದವರೆಗೆ ನಡೆಯಿತು.

ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಮಹಿಷಂದಾಯ,ಧೂಮಾವತಿ ಬಂಟ ದೈವಗಳ ನೇಮೋತ್ಸವ ನಡೆಯಿತು ಮತ್ತು ಮಾ.9ರಂದು ಕಲ್ಲುರ್ಟಿ ಪಂಜುರ್ಲಿ ದೈವಗಳ ಕೋಲಬಲಿ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರು ಮತ್ತು ಮೊಕ್ತೇಸರರು ಹಾಗೂ ಸರ್ವಸದಸ್ಯರು ಅಡಳಿತ ಮಂಡಳಿ ಮತ್ತು ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.






















