ಸುದ್ದಿ9 ಕೈಕಂಬ: ಗಂಜಿಮಠ ವ್ಯವಸಾಯಸೇವಾ ಸಹಕಾರಿ ಬ್ಯಾಂಕ್ನ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ನಿರ್ದೇಶಕರ ಆಯ್ಕೆ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಹತ್ತು ಸ್ಥಾನಗಳಲ್ಲಿ ಗೆದ್ದುಕೊಂಡು ಕಾಂಗ್ರೆಸ್ ಧೂಳಿಪಟವಾಗಿದೆ.

ಒಂದೂ ಸ್ಥಾನಗಳನ್ನು ಗೆಲ್ಲಲಾಗದ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಲೋಕಯ್ಯ ಕೊಟ್ಟಾರಿ, ಜಯಾನಂದ ನಾಯಕ, ಜಾನಪ್ಪ ಗೌಡ, ತಮ್ಮಯ್ಯ ಎಸ್ ಪೂಜಾರಿ, ಶೇಖರ್ ಶೆಟ್ಟಿ, ಶಿವರಾಮ ಕೊಟ್ಟಾರಿ, ಸುರೇಶ್ ಕೆ., ಹರಿಣಾಕ್ಷಿ, ರಾಮಪ್ಪ ಗೌಡ, ಹರಿಣಾಕ್ಷಿ ಗೆದ್ದುಕೊಂಡ ಬಿಜೆಪಿ ಅಭ್ಯರ್ಥಿಗಳು.