ನವದೆಹಲಿ : ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಕಟ್ಟುವ ಸಂದರ್ಭದಲ್ಲಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬರುವ ಮೇ ತಿಂಗಳಿನವರೆಗೆ ಅವಕಾಶವನ್ನು ನೀಡಲಾಗಿದ್ದು, ಅಷ್ಟರಲ್ಲಿ ನಿರ್ಣಯವನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ದೇಶಾದ್ಯಂತ ಬೃಹತ ಚಳುವಳಿಯನ್ನು ನಡೆಸಲಾಗುವುದೆಂದು ವಿಶ್ವ ಹಿಂದೂ ಪರಿಷತ್ತು ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ.RamaMandira ವಿಹಿಂಪನ ವಕ್ತಾರರಾದ ಶರದ ಶರ್ಮಾ ಇವರು ದಿನಪತ್ರಿಕೆಯೊಂದಿಗೆ ಮಾತನಾಡುತ್ತಾ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ಸ್ಥಾಪಿಸುವ ಸಲುವಾಗಿ ನಮಗೆ ೭೦ ಎಕರೆ ಭೂಮಿಯ ಅವಶ್ಯಕತೆಯಿದೆ. ಎಲ್ಲ ಸಂತರು ಮೇ ತಿಂಗಳಿನಲ್ಲಿ ಮೋದಿಯವರೊಂದಿಗೆ ಒಂದು ಸಭೆಯನ್ನು ನಡೆಸಲಿದ್ದಾರೆ ಹಾಗೂ ಶ್ರೀರಾಮ ಜನ್ಮಭೂಮಿಯಲ್ಲಿ ದೇವಸ್ಥಾನವನ್ನು ಕಟ್ಟಲು ಕಾನೂನು ರಚಿಸುವಂತೆ ಆಗ್ರಹಿಸಲಿದ್ದಾರೆ ಎಂದು ಹೇಳಿದರು.

By suddi9

Leave a Reply

Your email address will not be published. Required fields are marked *