ಕೈಕಂಬ:ಕರಿಯಂಗಳ ಗ್ರಾಮದ ಪುಂಚಮೆ ಕನ್ಯಬೆಟ್ಟು ಎಂಬಲ್ಲಿ ಮರಳು ತುಂಬಿಸಿಕೊಂಡು ಬಂದ ಪಿಕಾಪ್ ಕಮರಿಗೆ ಬಿದ್ದ ಘಟನೆ ಏ.1ರಂದು ಬುಧವಾರ ಸಂಜೆ ನಡೆದಿದೆ. ಕಟ್ಟಡ ಗಾರೆ ಕೆಲಸಕ್ಕೆ ಸಾಣೂರು ಪದವಿನಿಂದ ಮರಳು ತುಂಬಿಸಿಕೊಂಡು ಬಂದ ಪಿಕಾಪ್ ವಾಹನವೊಂದು ಕನ್ಯಬೆಟ್ಟು ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ ಬಿದ್ದು ನಾರಾಯಣ ಶೆಟ್ಟಿ ಅವರ ಕಂಪೌಂಡ್ನ ಮೇಲೆ ಬಿದ್ದಿದೆ.


ಸಬ್ದ ಕೇಳಿ ಓಡಿಬಂದ ಕಟ್ಟಡ ಕಾರ್ಮಿಕರು ಕೂಡಲೇ ಚಾಲಕನ್ನು ಹೊರಗೆಳೆದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ ಚಾಲಕನಿಗೆ ಸಣ್ಣಪುಟ್ಟ ಗಾಯಗಲಾಗಿದ್ದು ವಾಹನವನ್ನು ಸ್ಥಳಿಯರ ಸಹಕಾರದಿಂದ ಮೇಲಕ್ಕೆತ್ತಲಾಯಿತು. ಪಿಕಫ್ ಸಂಪೂರ್ಣ ಜಖಂಗೊಂಡಿದೆ.

