ಸುದ್ದಿ9 ಕೈಕಂಬ: ಕೊಲಂಬೆ ಗ್ರಾಮ ಸುಂಕದಕಟ್ಟೆ ಅಂಬಿಕಾನಗರದ ದೇವಿಕೃಪ ಬಾಬು ಶೆಟ್ಟಿ ( 65 ವ)  ಏ. 8 ರಂದು ಬುಧವಾರ  ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ನಿಧನ ಹೊಂದಿದರು. ಶ್ರೀಯುತರು ವಿಜಯ ಬ್ಯಾಂಕ್  ಉದ್ಯೋಗಿಯಾಗಿದ್ದು ಇತ್ತಿಚೇಗೆ  ನಿವ್ರತಿ ಹೊಂದಿದ್ದರು.

8 vp babhu shetty

ಅವರು ಗುರುಪುರ ಕೈಕಂಬದ ಗಣೇಶೋತ್ಸವ ಸೇವಾಸಮಿತಿಯ ಮಾಜಿ ಅಧ್ಯಕ್ಷರಾಗಿ ,ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಕಾರ್ಯಕರ್ತರಾಗಿದ್ದು  ಹಲವಾರು ವರ್ಷದಿಂದ ವಿವಿಧ ಸಂಘಟನೆಗಳ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಸಂತಾಪ: ಕೈಕಂಬ ಗಣೇಶೋತ್ಸವ ಸೇವಾ ಸಮಿತಿ ಅಧ್ಯಕ್ಷ ವಿನೋದ್ ಮಾಡ, ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ, ಉಮೇಶ್ ಶೆಟ್ಟಿ, ಸುರೇಶ್ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.

 

By suddi9

Leave a Reply

Your email address will not be published. Required fields are marked *