ಬಂಟ್ವಾಳ:ತಾಲ್ಲೂಕಿನ ಗ್ರಾಮೀಣ ಪ್ರದೇಶವಾಗಿರುವ ನರಿಕೊಂಬು ಗ್ರಾಮದ ಬೋಳಂತೂರು ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸಂಜೆ ನಡೆದ ‘ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಇಲ್ಲಿನ ಪುಟಾಣಿ ಮಕ್ಕಳು ಸ್ವತಃ ಪ್ರದರ್ಶಿಸಿದ ‘ಸುದರ್ಶನ ವಿಜಯ’ ಯಕ್ಷಗಾನ ಮತ್ತು ‘ನವಶಕ್ತಿ ವೈಭವ’ ಮತ್ತಿತರ ನೃತ್ಯ ಪ್ರಕಾರಗಳು ಸ್ಥಳೀಯ ಕಲಾಸಕ್ತರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಯಿತು.

ಆಕರ್ಷಕ ಬಣ್ಣದ ಧಿರಿಸಿನಿಂದ ಪುಂಡು ಮತ್ತು ರಾಕ್ಷಸ ವೇಷಧಾರಿಗಳು ಹಾಗೂ ಸಾತ್ವಿಕ ವೇಷಧಾರಿಗಳೊಂದಿಗೆ ಪರಸ್ಪರ ಮಾತುಕತೆ ಸಂವಹನವು ಯಕ್ಷಗಾನಕ್ಕೆ ಮೆರುಗು ನೀಡಿದರೆ, ಇನ್ನೊಂದೆಡೆ ‘ನವಶಕ್ತಿ ವೈಭವ’ ಮೂಲಕ ದೇವತೆಗಳ ಶಕ್ತಿ ಪ್ರದರ್ಶನ ನಡೆಯಿತು. ಈ ನಡುವೆ ತುಳು, ಕನ್ನಡ, ಹಿಂದಿ ಹಾಡು, ಕಂಸಾಳೆ, ಕರಗ ನೃತ್ಯ ಜೊತೆಗೆ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದಲೂ ನೃತ್ಯ ಪ್ರದರ್ಶನಗೊಂಡಿತು.
ನರಿಕೊಂಬು ಗ್ರಾ.ಪಂ.ಅಧ್ಯಕ್ಷೆ ಸುಮತಿ ಸದಾನಂದ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಲ ಪ್ರತಿಭೆ ಯಕ್ಷಗಾನ ಕಲಾವಿದೆ ಶೃತಿ ಇವರನ್ನು ಬಂಟ್ವಾಳ ಕೆಡಿಪಿ ಸದಸ್ಯ ಉಮೇಶ ಬೋಳಂತೂರು ಸನ್ಮಾನಿಸಿದರು.
ಮಕ್ಕಳಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಿದಾಗ ಅವರಿಂದ ನೈಜ ಪ್ರತಿಭೆ ಹೊರ ಬರಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ತಾ.ಪಂ.ಸದಸ್ಯ ಆನಂದ ಎ.ಶಂಭೂರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿನ್ಸೆಂಟ್ ಮಿನೇಜಸ್, ಉಪಾಧ್ಯಕ್ಷ ಮೋಹನ್, ಗ್ರಾ.ಪಂ.ಮಾಜಿ ಅಧ್ಯಕ್ಷ ಆನಂದ ಸಾಲ್ಯಾನ್, ಮಾಜಿ ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ, ಬಾಳ್ತಿಲ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ನಾಗರಾಜ ಮತ್ತಿತರರು ಶುಭ ಹಾರೈಸಿದರು.
ಉದ್ಯಮಿ ಕಿಶೋರ್ ಶೆಟ್ಟಿ, ಗ್ರಾ.ಪಂ.ಸದಸ್ಯರಾದ ಕೃಷ್ಣಪ್ಪ ನಾಟಿ, ರವೀಂದ್ರ ಸಪಲ್ಯ, ಜಯಂತಿ ಗೌಡ, ಕಲಾವಿದ ದಿವಾಕರದಾಸ್, ಜಯರಾಮ ಪಡ್ರೆ, ಧನ್ಯಶ್ರೀ ಮತ್ತಿತರರು ಇದ್ದರು.
ಮುಖ್ಯಶಿಕ್ಷಕಿ ಚಂದ್ರಾವತಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಟಿ.ಶರ್ಮಿಳಾ ಸ್ವಾಗತಿಸಿ, ಶಿಕ್ಷಕಿ ಪ್ರೆಸಿಲ್ಲಾ ಎವ್ಲಿನ್ ಡಿಸೋಜ ವಂದಿಸಿದರು. ಪ್ರಿಯಾಂಕ ಮತ್ತು ಶಿವರಾಮ್ ರಾವ್ ಕಾರ್ಯಕ್ರಮ ನಿರೂಪಿಸಿದರು