ಬಂಟ್ವಾಳ : ಅಲ್ಲಾಹನನ್ನು ಭಯಪಟ್ಟು ಜೀವಿಸುವ ಉಲಮಾಗಳು ಇಸ್ಲಾಮಿನ ನೈಜ ತತ್ವಾದರ್ಶಗಳನ್ನು ಜನತೆಯ ಮುಂದಿಡಲು ಯಾರನ್ನೂ ಭಯಪಡಬೇಕಾದ ಅಗತ್ಯವಿಲ್ಲ ಎಂದು ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು.
ಸಮಸ್ತ ಕೇರಳ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ಎಸ್.ಕೆ.ಎಸ್.ಎಸ್.ಎಫ್) ಆಲಡ್ಕ-ಪಾಣೆಮಂಗಳೂರು ಶಾಖಾ ವತಿಯಿಂದ ಆಲಡ್ಕ ಮರ್ಹೂಂ ಶಂಶುಲ್ ಉಲಮಾ ನಗರದ ಮರ್ಹೂಂ ಸಜಿಪ ಉಸ್ತಾದ್ ವೇದಿಕೆಯಲ್ಲಿ ಭಾನುವಾರ ನಡೆದ ಸಮಸ್ತ ಆದರ್ಶ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅನಿವಾರ್ಯ ಧಾರ್ಮಿಕ ಕಾರಣಗಳಿದ್ದಲ್ಲಿ ಒಂದೇ ಊರಿನಲ್ಲಿ ಎರಡು ಜುಮಾ ನಡೆಸುವುದು ಅನುವದನೀಯ. ಈ ಬಗ್ಗೆ ಯಾವುದೇ ಟೀಕೆ-ಟಿಪ್ಪಣಿಗಳಿಗೆ ಜನತೆ ಕಿವಿಗೊಡುವ ಅಗತ್ಯವಿಲ್ಲ ಎಂದರು.

ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಉದ್ಘಾಟಿಸಿದರು. ಅಡ್ಯಾರ್-ಕಣ್ಣೂರು ಕೇಂದ್ರ ಮಸೀದಿ ಮುದರ್ರಿಸ್ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ಮುತ್ತುಕೋಯ ತಂಙಳ್ ದುವಾಶೀರ್ವಚನಗೈದರು. ನಾಸಿರ್ ಫೈಝಿ ಕೂಡತ್ತಾಯಿ, ಮುಹಮ್ಮದ್ ಕುಟ್ಟಿ ನಿಝಾಮಿ ವಯನಾಡು ಮುಖ್ಯ ಭಾಷಣಗೈದರು.
ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ಅಬ್ಬಾಸ್ ದಾರಿಮಿ, ಗುಡ್ಡೆಅಂಗಡಿ ಎನ್.ಜೆ.ಎಂ. ಖತೀಬ್ ಅಬ್ದುಲ್ ಕರೀಂ ಫೈಝಿ ಕುಂತೂರು ಮಾತನಾಡಿದರು.
ಎಸ್.ಕೆ.ಐ.ಎಂ.ವಿ.ಬಿ. ಸದಸ್ಯರಾದ ಹಾಜಿ ಜಿ. ಅಬೂಬಕ್ಕರ್ ಗೋಳ್ತಮಜಲು, ಹಾಜಿ ಕೆ.ಎಸ್. ಇಸ್ಮಾಯಿಲ್ ಕಲ್ಲಡ್ಕ, ಜಿಲ್ಲಾ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಹಾಜಿ ಅಬ್ದುಲ್ ಹಮೀದ್ ಗೋಲ್ಡನ್, ಪ್ರಮುಖರಾದ ಸಯ್ಯಿದ್ ಜಿಫ್ರಿ ತಂಙಳ್ ಆತೂರು, ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಕೆ.ಎಸ್. ಹೈದರ್ ದಾರಿಮಿ ಕಲ್ಲಡ್ಕ, ಹನೀಫ್ ದಾರಿಮಿ ಬಂಟ್ವಾಳ, ಕೆ.ಐ. ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಸಿದ್ದೀಕ್ ಅಝ್ಹರಿ ಕಾಸರಗೋಡು, ಮಾಹಿನ್ ದಾರಿಮಿ ಪಾತೂರು, ಕೆ.ಬಿ. ದಾರಿಮಿ ಕೊಡಂಗಾಯಿ, ಕಾಸಿಂ ದಾರಿಮಿ ಕಿನ್ಯ, ಅಬ್ದುಲ್ ಮಜೀದ್ ಫೈಝಿ ನಂದಾವರ, ಹಾಜಿ ಎಸ್. ಅಬ್ಬಾಸ್ ಸಜಿಪ, ಅಬ್ದುಲ್ ಖಾದರ್ ಮಾಸ್ಟರ್ ಬಂಟ್ವಾಳ, ಹಾರೂನ್ ರಶೀದ್ ಬಂಟ್ವಾಳ, ಯೂಸುಫ್ ಕರಂದಾಡಿ, ಹಾಜಿ ಜಿ. ಯೂಸುಫ್ ಗೋಳ್ತಮಜಲು, ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ, ಆಲಡ್ಕ ಎಸ್.ಕೆ.ಎಸ್.ಎಫ್. ಘಟಕಾಧ್ಯಕ್ಷ ಹಾಜಿ ಅಬ್ದುಲ್ ರಝಾಕ್, ಉಪಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ, ಪಿ.ಬಿ. ಹಾಮದ್ ಹಾಜಿ ಪಾಣೆಮಂಗಳೂರು, ಅಬ್ದುಲ್ ಅಝೀಝ್ ಮುಸ್ಲಿಯಾರ್ ಅಮ್ಮೆಂಬಳ ಮೊದಲಾದವರು ಭಾಗವಹಿಸಿದ್ದರು.
ಎಸ್.ಕೆ.ಎಸ್.ಎಸ್.ಎಫ್. ಆಲಡ್ಕ ಘಟಕದ ಕಾರ್ಯದರ್ಶಿ ಶಫೀಕ್ ಆಲಡ್ಕ ಸ್ವಾಗತಿಸಿ, ಖಲೀಲ್ ದಾರಿಮಿ ಆಲಡ್ಕ ವಂದಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮೊದಲು ಮಿತ್ತಬೈಲು ಮಸೀದಿ ವಠಾರದಿಂದ ಆಲಡ್ಕ ಶಂಶುಲ್ ಉಲಮಾ ನಗರ ತನಕ ಆಕರ್ಷಕ ಬೈಕ್ ರ್ಯಾಲಿ ನಡೆಯಿತು. ಇದೇ ವೇಳೆ ಘಟಕದ ವತಿಯಿಂದ ಹೊರತರಲಾದ “ಸಮಸ್ತ” ವಿಶೇಷಾಂಕವನ್ನು ಬಿಡುಗಡೆಗೊಳಿಸಲಾಯಿತು.