ಕನ್ನಡ ಸಾಹಿತ್ಯಕ್ಕೆ ನಿರ್ಪಾಜೆ ಕೊಡುಗೆ ಅನನ್ಯ: ಏರ್ಯ
ಬಂಟ್ವಾಳ:ಕಲ್ಹಣನ ರಾಜತರಂಗಿಣಿ ಕನ್ನಡ ಭಾಷಾನುವಾದವು ಕನ್ನಡ ಸಾಹಿತ್ಯ ಲೋಕಕ್ಕೆ ನೀರ್ಪಾಜೆ ಭೀಮ ಭಟ್ಟರು ನೀಡಿದ ಕೊಡುಗೆ ಅನನ್ಯವಾದುದು. ಈ ಐತಿಹಾಸಿಕ ಕೃತಿಯನ್ನು ಪುನರ್ ಮುದ್ರಿಸುವ ಕಾರ್ಯವು ಅಗತ್ಯವಾಗಿ ನಡೆಯಬೇಕು ಎಂದು ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು.
ತಾಲ್ಲೂಕಿನ ನಿರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ ವತಿಯಿಂದ ಮೆಲ್ಕಾರ್‍ನಲ್ಲಿ ಭಾನುವಾರ ಸಂಜೆ ನಡೆದ ‘ದಿ.ನಿರ್ಪಾಜೆ ಭೀಮ ಭಟ್ಟರ 80ರ ವರ್ಷಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಕ್ಷೇತ್ರ ಸೇರಿದಂತೆ ಸಹಕಾರಿ, ರಾಜಕೀಯ, ಮತ್ತು ಶೈಕ್ಷಣಿಕ ರಂಗದಲ್ಲಿಯೂ ಭೀಮಭಟ್ಟರು ಮೇರು ವ್ಯಕ್ತಿತ್ವದ ಮೂಲಕ ಗುರುತಿಸಿಕೊಂಡಿದ್ದಾರೆ. ಸಾಹಿತ್ಯ ಮತ್ತು ಪತ್ರಿಕೋದ್ಯಮ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಮೂಲಕ ಕ್ರಾಂತಿಕಾರಿ ಸುಧಾರಕರೂ ಆಗಿದ್ದರು ಎಂದು ಅವರು ವಿಶ್ಲೇಷಿಸಿದರು.
ನಿರ್ಪಾಜೆ ಭೀಮಭಟ್ಟರ ಅಭಿಮಾನಿ ಬಳಗ ಅಧ್ಯಕ್ಷ ಬಿ.ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಭೀಮಭಟ್ಟರ ಬದುಕು ಮತ್ತು ಬರಹ ಬಗ್ಗೆ ಹಿರಿಯ ಸಾಹಿತಿ ವಿ.ಗ.ನಾಯಕ, ರಾಜತರಂಗಿಣಿ ಬಗ್ಗೆ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ಟ ಉಪನ್ಯಾಸ ನೀಡಿದರು.
ಸಮಿತಿ ಸಂಚಾಲಕ ಎ.ಸಿ.ಭಂಡಾರಿ, ಕೋಶಾಧಿಕಾರಿ ಎಸ್.ಗಂಗಾಧರ್ ಭಟ್ ಕೊಳಕೆ ಮತ್ತಿತರರು ಉಪಸ್ಥಿತರಿದ್ದರು.

12btl-nirpaje
ಪ್ರಶಸ್ತಿ ಪ್ರದಾನ:
ಇದೇ ವೇಳೆ ಹಿರಿಯ ವಿದ್ವಾಂಸ ಸಿದ್ಧಮೂಲೆ ಶಂಕರನಾರಾಯಣ ಭಟ್ಟ ಇವರಿಗೆ ‘ಕನ್ನಡದ ಕಲ್ಹಣ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಂಕಣಕಾರ ಪ್ರೊ.ವಿ.ಬಿ.ಅರ್ತಿಕಜೆ ಪ್ರಶಸ್ತಿ ಪುರಸ್ಕøತರನ್ನು ಪರಿಚಯಿಸಿದರು. ಹಿರಿಯ ಕವಿ ಅಂಶುಮಾಲಿ ಉಡುಪಿ ಶುಭ ಹಾರೈಸಿದರು.
ಸಮಿತಿ ಸಲಹೆಗಾರ ಕೈಯ್ಯೂರು ನಾರಾಯಣ ಭಟ್ ಸ್ವಾಗತಿಸಿ, ಸಾಹಿತಿ ರವಿಶಂಕರ ಒಡ್ಡಂಬೆಟ್ಟು ವಂದಿಸಿದರು. ಬಂಟ್ವಾಳ ಕಸಾಪ ಅಧ್ಯಕ್ಷ ಜಯಾನಂದ ಪೆರಾಜೆ ಪ್ರಾಸ್ತಾವಿಕ ಮಾತನಾಡಿದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್ ಮತ್ತು ಉಪನ್ಯಾಸಕ ವಿ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *