ಬೆಂಗಳೂರು:  ಭಾರತದ ಸಂವಿಧಾನ ನಿರ್ಮಾತೃ, ಹಿಂದುಳಿದ ವರ್ಗದವರ ಮ್ರಬಲ ಧ್ವನಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ 124ನೇ ಜನ್ಮದಿನಾಚರಣೆಯ ಸಂದರ್ಭವಾಗಿರುವ ಎಪ್ರಿಲ್‌ 14ರಂದು ದೇಶದೆಲ್ಲೆಡೆ ಹತ್ತು ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಸಾಮಾಜಿಕ ಜಾಲ ತಾಣಗಳಲ್ಲಿ ‘ಜೈ ಭೀಮ್’ ಎಂಬ ಜಯಘೋಷ ಕೇಳಿ ಬರುತ್ತಿದೆ. ಗೂಗಲ್ ಡೂಡ್ಲ್ ಮೂಲಕ ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಲಾಗುತ್ತಿದೆ.

01

ಇಂಗ್ಲಿಷ್‌ ನಲ್ಲಿ ಗೂಗಲ್‌ ಎಂದು ಬರೆಯುವ ಸಂದರ್ಭದಲ್ಲಿ ಎರಡನೇ “ಒ’ ಅಕ್ಷರವನ್ನು ಅಂಬೆಡ್ಕರ್‌ ಅವರ ಕ್ಯಾರಿಕೇಚರ್‌ ಆಗಿಸುವ ಮೂಲಕ ಈ ಡೂಡಲ್‌ ರೂಪುಗೊಂಡಿದೆ.ಅವರ ಜನ್ಮದಿನವಾಗಿರುವ ಈ ದಿನದಂದು ಗೂಗಲ್‌ ಗೆ ಭೇಟಿ ನೀಡುವ ಎಲ್ಲರಿಗೂ ಈ ಡೂಡಲ್‌ ರಚನೆ ತೆರೆದುಕೊಳ್ಳಲಿದೆ. ಹಲವು ಸಾಧಕರ ಹಾಗೂ ಪ್ರಮುಖ ಧಾರ್ಮಿಕ, ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ವಿಶಿಷ್ಟ ರೀತಿಯ ಡೂಡಲ್‌ಗಳನ್ನು ತನ್ನ ಮುಖಪುಟವನ್ನಾಗಿಸುವ ಪರಿಪಾಟವನ್ನು ಗೂಗಲ್‌ ಈ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದೆ.

ಖ್ಯಾತ ನಾಮರ ಹುಟ್ಟುಹಬ್ಬ, ಹಬ್ಬ ಹರಿದಿನ, ವಾರ್ಷಿಕೋತ್ಸವ ದಿನಗಳಲ್ಲಿ ಗೂಗಲ್ ಲೋಗೋವನ್ನು ಅಲಂಕರಿಸಿ ಪ್ರದರ್ಶಿಸಲಾಗುತ್ತದೆ. ಗೂಗಲ್ ಲೋಗೋವನ್ನು ಕಲಾತ್ಮಕವಾಗಿ ರೂಪಿಸುವುದಕ್ಕೆ ಡೂಡಲ್ಸ್ ಎನ್ನಲಾಗುತ್ತದೆ. ಪ್ರತಿ ವರ್ಷ ಆಯ್ದ ವಿಶೇಷ ಸಂದರ್ಭಕ್ಕಾಗಿ ಡೂಡ್ಲ್ ರಚಿಸಲು ಶಾಲಾ ಮಕ್ಕಳಿಗೆ ವಿವಿಧ ಹಂತದ ಸ್ಪರ್ಧೆ ಏರ್ಪಡಿಸಲಾಗುತ್ತದೆ.ವಿಜೇತ ಡೂಡ್ಲ್ ಗೂಗಲ್ ಇಂಡಿಯಾ ಪೇಜ್ ನಲ್ಲಿ ಕಾಣಿಸಿಕೊಳ್ಳಲಿದೆ.

By suddi9

Leave a Reply

Your email address will not be published. Required fields are marked *