ಬಂಟ್ವಾಳ :ಬಂಟ್ವಾಳ ತಾಲೂಕು ವಾಮದಪದವು ಸ.ಪ್ರ.ದ.ಕಾಲೇಜಿನಲ್ಲಿ 2015-16ನೇ ಸಾಲಿನ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ತರಗತಿಗೆ ಪ್ರವೇಶಾತಿ ಅರ್ಜಿಗಳು ಲಭ್ಯವಿದೆ.
ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಬಿ.ಸಿ.ಎಂ ವಿದ್ಯಾರ್ಥಿನಿಲಯದ ಸೌಲಭ್ಯವಿದ್ದು ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ವಿಜ್ಞಾನ ವಿಭಾಗದ ಪದವಿ ತರಗತಿಗೆ ಕೆಲವೇ ಸೀಟುಗಳು ಬಾಕಿ ಇದ್ದು ಹೆಚ್ಚಿನ ವಿವರಗಳಿಗೆ ಕಾಲೇಜಿನ ಕಛೇರಿ ದೂರವಾಣಿ ಸಂಖ್ಯೆ 08255-282252 ನ್ನು ಸಂಪರ್ಕಿಸಬಹುದು.