ಬಂಟ್ವಾಳ : ವಿಶ್ವ ಯೋಗ ದಿನಾಚರಣೆಯ ಪೂರ್ವಭಾವಿಯಾಗಿ ಎನ್‍ಸಿಸಿ ಕೆಡಿಟ್‍ಗಳಿಗೆ ಯೋಗ ಶಿಬಿರ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಜರಗಿತು.

ಶಿಬಿರದಲ್ಲಿ ಪುಂಜಾಲಕಟ್ಟೆ ಸ.ಪ್ರೌ.ಶಾಲೆ ಮತ್ತು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆ ಮತ್ತು ಪದವಿ ಕಾಲೇಜಿನ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಉಜಿರೆಯ ಶ್ರೀ ಕ್ಷೇತ್ರ ಧ.ಮಂ.ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತರಬೇತಿ ನೀಡುತ್ತಿದ್ದು ತರಬೇತಿ ಪಡೆದ ಎಲ್ಲಾ ವಿದ್ರ್ಯಾರ್ಥಿಗಳು ಜೂ.21ರಂದು ಉಜಿರೆಯಲ್ಲಿ ನಡೆಯುವ ವಿಶ್ವಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿರುವರು.
ಪುಂಜಾಲಕಟ್ಟೆ ಸ.ಪ.ಪೂ.ಕಾಲೇಜು ಎನ್‍ಸಿಸಿ ಅ„ಕಾರಿ ನಿರಂಜನ್ ಜೈನ್, ಮಡಂತ್ಯಾರು ಸೇಕ್ರೆಡ್‍ಹಾರ್ಟ್ ಕಾಲೇಜಿನ ಎನ್‍ಸಿಸಿ ಅ„ಕಾರಿಗಳಾದ ಎಲ್ಯಾಸ್ ಪಿಂಟೋ, ಜೆರಾಲ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.