ಸುದ್ದಿ9 ಪೊಳಲಿ: ಸಮಾಲೋಚನ ಸಭೆಯಲ್ಲಿ ಮಾತಾನಾಡಿದ ಸ್ವಾಮಿವಿವೇಕ ಚೈತನ್ಯನಂದ ಅವರು ರಾಷ್ಟ್ರಾದ್ಯಂತ ಏಕರೂಪದ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದು ಇಂದು ಅಗತ್ಯವಾಗಿದೆ. ಎಳೆಯ ಮಕ್ಕಳಲ್ಲಿ ಬಾಲ್ಯದಲ್ಲೆ ಪೋಷಕರು ಅಥಾವ ಶಿಕ್ಷಕರು ತಾರತಮ್ಯವನ್ನು ಅನುಸರಿಸಿದರೆ ಮುಂದಿನ ದಿನಗಳಲ್ಲಿ ಸಾಮಾಜಿಕ ಹಿತಕ್ಕೆ ದಕ್ಕೆಯಾಗಿರುವುದರಿಂದ ಶಾಲೆಯಲ್ಲಿ ಎಲ್ಲಾ ಮಕ್ಕಳನ್ನು ಸಮಾನವಾಗಿ ನೋಡುವ ಪದ್ದತಿ ಅನುಸ್ಠಾನವಾಗ ಬೇಕಾಗಿದೆ ಎಂದು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚ್ಯೆತನ್ಯಾನಂದ ಹೇಳಿದರು.
ಅವರು ರಾಷ್ಟ್ರೀಯ ಶಿಕ್ಷಣ ಕರಡು ನೀತಿ ರಚನೆಯ ಸಂಬಂಧವಾಗಿ ಕರಿಯಂಗಳ ಗ್ರಾಮದ ಪೊಳಲಿ ರಾಮಕೃಷ್ಣ ತಪೋವನದಲ್ಲಿ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಬೆಂಜನಪದವು ಸರಕಾರಿ ಪದವಿ ಪೂರ್ವ ಕಾಲೇಜು ಇವರು ರಾಷ್ಟ್ರೀಯ ಶಿಕ್ಷಣ ಕರಡು ನೀತಿ ರಚನೆ ಸಂಬಂಧವಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಭೆಯನ್ನು ನಡೆಸಲಾಯಿತು .ಸಂಪನ್ಮೂಲ ವ್ಯಕ್ತಿಯಾಗಿ ರವಿಚಂದ್ರ ಮಯ್ಯ ಮತ್ತು ಲೋಕೇಶ್ ಆಗಮಿಸಿಮಾಹಿತಿ ನೀಡಿದರು.
ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ಅವರವರ ಧರ್ಮನುಗುಣವಾಗಿ ಅನುಸರಿಸುವ ಸಾಂಪ್ರಾದಾಯಗಳನ್ನು ಕೆಲವು ಶಾಲೆಗಳಲ್ಲಿ ನಿಷೇದಿಸುವ ಕ್ರಮ ಸರಿಯಲ್ಲ ಎಂದು ತಾಲೂಕು ಪಂಚಾಯತ್ ಸದಸ್ಯೆ ಶ್ಯಲಜಾ ಅವರು ಈ ಸಂದರ್ಭದಲ್ಲಿಹೇಳಿದರು.
ಸಮಾಲೋಚನ ಸಭೆಯಲ್ಲಿ ಪುದು ಜಿಲ್ಲಾ ಪಂ ಸದಸ್ಯೆ ಜಯಶ್ರೀ ಕೆ.ಎ., ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರವತಿ ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ ಉಪಾಧ್ಯಕ್ಷರುಗಳಾದ ಪುಂಚಮೆ ಚಂದ್ರಶೇಖರ ರಾವ್, ವಾಮನ ಆಚಾರ್ಯ ಮತ್ತು ಪಂಚಾಯತ್ ಸದಸ್ಯರು ಹಾಗೂ ಪೊಳಲಿ ವಿದ್ಯಾವಿಲಾಸ ,ಅಮ್ಮುಂಜೆ ಹಿರಿಯ ಪ್ರಾಥಮಿಕ ಶಾಲೆ,ಬಡಕಬೈಲ್ ಡೊಮೆನಿಕ್, ಪೊಳಲಿ ರಾಜರಾಜೇಶ್ವರೀ ಫ್ರೌಡ ಶಾಲಾ ಶಿಕ್ಷಕರು ಭಾಗವಹಿಸಿ ಶಿಕ್ಷಣ ಅಧಿಕಾರಿಗಳಲ್ಲಿ ಮಕ್ಕಳಿಗೆ ಬೇಕಾದ ಉತ್ತಮ ಶಿಕ್ಷಣ ನೀಡುವ ಸಲುವಾಗಿ ಹಲವಾರು ವಿಷಯಗಳ ಬಗ್ಗೆ ಚಚರ್ೆ ನಡೆಸಿದರು. ಸರಕಾರಿ ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಎಸ್ ಎನ್ ಮೈಲಾರ್ ನಿರೂಪಿಸಿದರು. ಶಿಕ್ಷಕಿ ಪ್ರತಿಭಾ ಭಟ್ ಸ್ವಾಗತಿಸಿ ಶಿಕ್ಷಕ ದೇವ್ ದಾಸ್ ಶೆಟ್ಟಿ ಧನ್ಯವಾದವಿತ್ತರು.
4 ವಿಪಿ ಸಮಲೋಚನ ಸಭ




