ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ವಸತಿಗೃಹವೊಂದರಲ್ಲಿ ಅನ್ಯ ಮತೀಯ ತರುಣಿ ಜೊತೆಗೆ ಮುಸ್ಲಿಂ ವ್ಯಕ್ತಿಯೊಬ್ಬರು ಠಿಕಾಣಿ ಹೂಡಿದ್ದಾರೆ ಎಂದು ಆರೋಪಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ಪೊಲೀಸನ್ನು ಬೇಸ್ತು ಬೀಳಿಸಿದ ಘಟನೆ ಸೋಮವಾರ ನಡೆದಿದೆ.
ತಾಲ್ಲೂಕಿನ ಸುಲೈಮಾನ್ ಎಂಬವರು ತನ್ನ ಎರಡನೇ ಪತ್ನಿ ಜೊತೆಗೆ ಭಾನುವಾರ ಬಂದು ಬಿ.ಸಿ.ರೋಡ್ನ ವಸತಿಗೃಹವೊಂದರಲ್ಲಿ ಇರುವ ಬಗ್ಗೆ ಪೂರ್ವ ಮಾಹಿತಿ ಪಡೆದ ಕಿಡಿಗೇಡಿಗಳು ಈ ರೀತಿ ಕರೆ ಮಾಡಿದ್ದಾರೆ ಎನ್ನಲಾಗಿದೆ. ಸುಲೇಮಾನ್ ತನ್ನ ಮೊದಲ ಪತ್ನಿ ತೊರೆದು ಎರಡನೇ ಪತ್ನಿಯನ್ನು ವಿವಾಹವಾಗಿರುವ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ಬಳಿಕ ಬಿಡುಗಡೆಗೊಳಿಸಿರುವುದಾಗಿ ತಿಳಿಸಿದ್ದಾರೆ.