ಬಂಟ್ವಾಳ: ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘ ಈ ಬಾರಿ ತನ್ನ ಪತ್ರಿಕಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದೆ. ತಮ್ಮ ವೃತ್ತಿ ಕ್ಷೇತ್ರ ವ್ಯಾಪ್ತಿಯ ಯಾವುದಾದರೂ ಸಂಘ ಸಂಸ್ಥೆಗಳು ನಡೆಸುವ ರಕ್ತದಾನ ಶಿಬಿರದ ಬಗ್ಗೆ ವರದಿ ಮಾಡಿ ಬೆಳಕು ಚೆಲ್ಲುವ ಪತ್ರಕರ್ತರೇ ಸ್ವತಃ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ನಾಗರೀಕ ಸೇವಾ ಸಮಿತಿ ನರಿಕೊಂಬು ಇದರ ಜಂಟಿ ಆಶ್ರಯದಲ್ಲಿ ಕೆ.ಎಸ್.ಹೆಗ್ಡೆ ಚಾರೀಟೇಬಲ್ ಆಸ್ಪತ್ರೆ ದೇರಳಕಟ್ಟೆ, ವೆನ್ಲಾಕ್ ಸರಕಾರಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದೊಂದಿಗೆ ಬಿ.ಸಿ.ರೋಡಿನ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ, ರಂಗೋಲಿ ಹೊಟೇಲ್ ಮಾಲೀಕ ಚಂದ್ರಹಾಸ ಶೆಟ್ಟಿ, ಪೊಲೀಸ್ ಸಿಬ್ಬಂದಿ ಜಗದೀಶ ಏಕಕಾಲದಲ್ಲಿ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಪತ್ರಕರ್ತರ ಸಂಘದ ಉಪಾದ್ಯಕ್ಷ ಸೂರ್ಯನಾರಾಯಣ ಪೂವಳ, ಕೋಶಾಧಿಕಾರಿ ಸಂದೀಪ್ ಸಾಲ್ಯಾನ್ ಪ್ರಮುಖರಾದ ರಾಘವೇಂದ್ರ ಬನ್ನಿಂತಾಯ, ಸದಾನಂದ ಮೊಡಂಕಾಪು, ಶಾಂತರಾಮ ಶೆಣೈ, ಪ್ರಶಾಂತ್, ಸಂದೀಪ್ ಮೊಡಂಕಾಪು, ಸತೀಶ್ ಕುಮಾರ್ ಸೇರಿದಂತೆ, ಪೊಲೀಸರು, ನ್ಯಾಯವಾದಿಗಳು, ಗೃಹರಕ್ಷಕ ದಳದ ಸಿಬ್ಬಂದಿಗಳು, ಛಾಯಾಗ್ರಾಹಕರು ಸಹಿತ ಸಾರ್ವಜನಿಕರು ರಕ್ತದಾನ ಮಾಡಿದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ನಾಗರೀಕ ಜಾಗೃತ ಸಮಿತಿಯ ಅಧ್ಯಕ್ಷ ಪ್ರಕಾಶ್ ಕಾರಂತ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಶ್ರೀಪ್ರಕಾಶ್ ಜೈನ್, ಜಿಲ್ಲಾ ಕಾ.ನಿ.ಪತ್ರಕರ್ತರ ಸಂಘದ ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ, ತಾಲೂಕು ಸಂಘದ ಕಾರ್ಯದರ್ಶಿ ರತ್ನದೇವ್ ಪುಂಜಾಲಕಟ್ಟೆ, ಸದಸ್ಯ ಗೋಪಾಲ ಅಂಚನ್, ಮೇರಮಜಲು ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷೆ ವೃಂದ ಪೂಜಾರಿ, ದಿನೇಶ್ ರೈ ಕುಪ್ಪಿಲ, ಎಂ.ಕೆ. ಖಾದರ್ ಮಾರಿಪಳ್ಳ ಹಾಗೂ ಕೆಎಸ್ ಹೆಗಡೆ ಆಸ್ಪತ್ರೆ ಹಾಗೂ ವೆನ್ಲಾಕ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ರಕ್ತದಾನ ಶಿಬಿರದಲ್ಲಿ 53 ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ಈ ಮೂಲಕ ಸೇವಾಂಜಲಿ ಪ್ರತಿಷ್ಟಾನದ 75ನೇ ರಕ್ತದಾನ ಶಿಬಿರ ಪೂರ್ಣಗೊಂಡಿತು. ಇದೇ ವೇಳೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ತಿಂಗಳ ಮೊದಲನೇ ಮಂಗಳವಾರ ನಡೆಯುವ ಉಚಿತ ಆರೋಗ್ಯ ತಪಾಸಣ ಶಿಬಿರವೂ ನಡೆಯಿತು. ನೂರಾರು ಸಂಖ್ಯೆಯಲ್ಲಿ ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.