ಮೂಡುಬಿದಿರೆ: ಜೆ.ಬಿ.ಎಫ್ ಪೆಟ್ರೋಕೆಮಿಕಲ್ಸ್ ಲಿ. ಮಂಗಳೂರು ಇಲ್ಲಿನ ಪ್ರಯೋಗಾಲಯ ವಿಭಾಗದಲ್ಲಿನ ಲ್ಯಾಬ್ ಮುಖ್ಯಸ್ಥ ಪ್ರಕಾಶ್ ಎಸ್. ನಾಯಕ್ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಬಿ.ನಾರಾಯಣ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಸಿಂಥೆಸಿಸ್ ಸ್ಟ್ರಕ್ಚರಲ್ ಆ್ಯಂಡ್ ಬಯೊಲಾಜಿಕಲ್ ಸ್ಟಡೀಸ್ ಆನ್ ನೈಟ್ರೋಜನ್ ಕಂಟೈನಿಂಗ್ ಹೆಟೆರೋಸೈಕ್ಲಿಕ್ ಕಂಪೌಂಡ್ಸ್ ಆ್ಯಂಡ್ ದೆಯರ್ ಇಂಟರ್ ಮೀಡಿಯೇಟ್ಸ್’ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ.

ಪ್ರಕಾಶ್ ಎಸ್. ನಾಯಕ್ ಅವರು ಸಂತ ಭಧ್ರಗಿರಿ ಅಚ್ಯುತದಾಸರ ನಿಕಟವರ್ತಿಯಾಗಿದ್ದ ಮೂಡುಬಿದಿರೆ ಆಲಂಗಾರಿನ ಸುಧಾಕರ ಎ. ನಾಯಕ್ ಹಾಗೂ ಜ್ಯೋತಿ .ಎಸ್. ನಾಯಕ್ ದಂಪತಿಯ ಪುತ್ರ.